ದೈವಜ್ಞ ಬ್ರಾಹ್ಮಣ ಸಂಘ ಒಳಕಾಡು: 43ನೇ ವರ್ಷದ ವಾರ್ಷಿಕೋತ್ಸವ

0
10

ಉಡುಪಿ: ದೈವಜ್ಞ ಬ್ರಾಹ್ಮಣ ಸಂಘ  (ರಿ ) ಒಳಕಾಡು ಉಡುಪಿ ಇದರ 43 ನೇ  ವರ್ಷದ ವಾರ್ಷಿಕೋತ್ಸವ ಜುಲೈ 20  ರಂದು  ಉಡುಪಿ ಒಳಕಾಡಿನ  ದೈವಜ್ಞ ಮಂದಿರ ದಲ್ಲಿ  ನೆಡೆಯಿತು.                                             ಶ್ರೀದೇವರ ಸನ್ನಿಧಿಯಲ್ಲಿ ಸಂಘದ  ಅಧ್ಯಕ್ಷರಾದ  ಎಸ್  ಸುಬ್ರಮಣ್ಯ ಶೇಟ್  ಮಾರ್ಗದರ್ಶನದಲ್ಲಿ ಸಾಮೂಹಿಕ   ಪ್ರಾರ್ಥನೆ  ಬಳಿಕ ಗಣಹೋಮ  , ಸತ್ಯನಾರಾಯಣ ಪೂಜೆಯನ್ನು  ವೇದ ಮೂರ್ತಿ ವಾಸುದೇವ ಉಪಾಧ್ಯಾಯ ಧಾರ್ಮಿಕ ಪೂಜೆಗಳನ್ನು ನೆಡೆಸಿಕೊಟ್ಟರು  ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ಜರಗಿತು .                                                                                                                                              ಸಂಜೆ ನೆಡೆದ  43 ನೇ  ವರ್ಷದ ವಾರ್ಷಿಕೋತ್ಸವ   ಸಭಾ ಕಾರ್ಯಕ್ರಮದಲ್ಲಿ   ದೈವಜ್ಞ ಬ್ರಾಹ್ಮಣ ಸಂಘದ  ಅಧ್ಯಕ್ಷರಾದ   ಎಸ್  ಸುಬ್ರಮಣ್ಯ ಶೇಟ್  ಅಧ್ಯಕ್ಷತೆ ವಹಿಸಿಕೊಡರು  , ಮುಖ್ಯ ಅತಿಥಿಯಾಗಿ ಉಡುಪಿ ವಿಭಾಗದ ಬಂದರು ಮತ್ತು ಮೀನುಗಾರಿಕಾ  ಇಲಾಖೆಯ ಕಾರ್ಯನಿರ್ವಾಹಕ  ಅಭಿಯಂತರಾದ  ಪ್ರಸನ್ನ ಕುಮಾರ್ ಶೇಟ್  ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ , ನಮ್ಮ ಹಿರಿಯರು    ಸಮಾಜದಲ್ಲಿ  ಜಾತಿಯ ಸಂಘಟನೆ ಕಟ್ಟಿ ಬೆಳಸಿ  ದೈವಜ್ಞ ಮಂದಿರ  , ಸುಂದರ ಸಭಾಂಗಣ ನಿರ್ಮಿಸಿ  ಯುವಜನತೆಯನ್ನು  ಒಂದುಗೂಡಿಸಿ ಅದರ ಮೂಲಕ ಸಮಾಜಸೇವೆ ಹಾಗೂ ವಿದ್ಯಾರ್ಥಿ ಪುರಸ್ಕಾರ , ಆರ್ಥಿಕ ಸಹಾಯ  , ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ  ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ  ಪ್ರಸನ್ನ ಕುಮಾರ್ ಶೇಟ್ ರವರನ್ನು ಗೌರವಿಸಲಾಯಿತು ,        ಪರಿಸರ ಪ್ರೇಮಿ ಉರಗ ತಜ್ಞ ಸಾವಿರಾರು ಹಾವುಗಳ ಸಂರಕ್ಷಣೆಗೈದ  ಅಕ್ಷಯ ಶೇಟ್ ರವರನ್ನು ಅಭಿನಂದಿಸಿ  ಗೌರವಿಸಲಾಯಿತು ,   ದೈವಜ್ಞ ಮಂದಿರದ  ಮೆನೇಜರ್ ಸೇವೆಸಲ್ಲಿಸುತ್ತಿರುವ  ವೆಂಕಟೇಶ್ ಶೇಟ್ ರವರನ್ನು ಗೌರವಿಸಲಾಯಿತು         

ವೇದಿಕೆಯಲ್ಲಿ ಸಂಘದ  ಉಪಾಧ್ಯಕ್ಷರಾದ ಸತ್ಯನಾರಾಯಣ ಶೇಟ್  , ಕಾರ್ಯದರ್ಶಿ  ಮಂಜುನಾಥ್ ಶೇಟ್  , ಜೊತೆ ಕಾರ್ಯದರ್ಶಿ ಮಹೇಶ್ ಶೇಟ್ , ದೈವಜ್ಞ ಬ್ರಾಹ್ಮಣ ಯುವಕ ಮಂಡಳಿಯ ಅಧ್ಯಕ್ಷ ಕಿರಣ್ ಶೇಟ್ ,  ನಾಗಭೂಷಣ ಶೇಟ್  ಸ್ವಾಗತಿಸಿದರು  , ರಾಘವೇಂದ್ರ ಶೇಟ್  , ಅನಘ ರೇವಣಕರ್  ಕಾರ್ಯಕ್ರಮ ನಿರೂಪಿಸಿದರು , ದೈವಜ್ಞ ಬ್ರಾಹ್ಮಣ ಸಂಘದ  ಪಧಾಧಿಕಾರಿಗಳು ಸಹಕರಿಸಿದರು , ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ  ,  ದೈವಜ್ಞ ಬ್ರಾಹ್ಮಣ ಯುವಕ ಮಂಡಳಿಯ ಸಹಕಾರದಲ್ಲಿ  ಮನೋರಂಜನಾ ಕಾರ್ಯಕ್ರಮ ನೆಡೆಸಿಕೊಟ್ಟರು            

LEAVE A REPLY

Please enter your comment!
Please enter your name here