ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ.) ಮತ್ತು ಕರಾವಳಿ ಕೆಸರಿ ಮಹಿಳಾ ಘಟಕ ದರೆಗುಡ್ಡೆ ಆಶ್ರಯದಲ್ಲಿ ನಡೆಯುವ 14ನೇ ವರ್ಷದ ವಾರ್ಷಿಕೋತ್ಸವ ಮತ್ತು 6ನೇ ವರ್ಷದ ಸಾರ್ವಜನಿಕ ಶನೇಶ್ವರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಫೆಬ್ರವರಿ 21 ಶನಿವಾರದಂದು ನಡೆಯುವ ಶನೇಶ್ವರ ಪೂಜೆಯ ಪೂರ್ವಭಾವಿ ಸಭೆಯು ಧರೆಗುಡ್ಡೆಯಲ್ಲಿ ನಡೆಯಿತು ಹಾಗೂ ಮಹಿಳಾ ಸದಸ್ಯರಿಗೆ ಸಮವಸ್ತ್ರವನ್ನು ವಿಸ್ತರಿಸಲಾಯಿತು ಈ ಸಂದರ್ಭದಲ್ಲಿ ಕರಾವಳಿ ಕೇಸರಿ ಮಹಿಳಾ ಘಟಕಕ್ಕೆ ಹಲವಾರು ಮಹಿಳೆಯರು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕರಾವಳಿ ಕೇಸರಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಸ್ಥಾಪಕ ಅಧ್ಯಕ್ಷರಾದ ಸಮಿತ್ ರಾಜ್ ದರೆಗುಡ್ಡೆ, ಗೌರವಾಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು ಮಹಿಳಾ ಘಟಕ ಗೌರವ್ಯಾಧ್ಯಕ್ಷರಾದ ರೇಷ್ಮಾ ದಿನೇಶ್ ನಾಯಕ್ ಅಧ್ಯಕ್ಷರಾದ ಬೇಬಿ ಚಿದಾನಂದ ಕುಕ್ಯಾನ್, ಪ್ರದಾನ ಕಾರ್ಯದರ್ಶಿ ಉಷಾ ಉಪಾಧ್ಯಕ್ಷರಾದ ಸುಮಲತ ಗಣೇಶ್ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

