ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದರೆಗುಡ್ಡೆ ಸೋಮನಾಥೇಶ್ವರ ಸಂಜೀವಿನಿ ಗ್ರಾಮ ಒಕ್ಕೂಟದ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಕಾರ್ಯಗಾರ ದಿನಾಂಕ 09.09.2025 ರಿಂದ 12.09.2025 ರವರೆಗೆ ನಡೆಯಲಿದ್ದು, ಮೊದಲನೆಯ ದಿನವಾದ ಇಂದು ಉದ್ಘಾಟನೆ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿರವರು ವಹಿಸಿದ್ದರು. ಒಕ್ಕೂಟದ ಕಾರ್ಯದರ್ಶಿ ಸವಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜುರವರು, ಸಂಪನ್ಮೂಲ ವ್ಯಕ್ತಿ ಮೌನೇಶ್ ವಿಶ್ವಕರ್ಮ ರವರು ಹಾಜರಿದ್ದು ಮಾಹಿತಿಗಳನ್ನು ನೀಡಿದರು. ವಲಯ ಮೇಲ್ವಿಚಾರಕಿ ಪ್ರಜ್ವತಾರವರು ತರಬೇತಿಯ ಪ್ರಯೋಜನಗಳ ಬಗ್ಗೆ ತಿಳಿಸಿ, ಶುಭ ಹಾರೈಸಿದರು.
ಒಕ್ಕೂಟದ ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಒಕ್ಕೂಟದ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. ನಿರೂಪಣೆಯನ್ನು ಎಂ ಬಿ ಕೆ ಮಾನಸ, ಸ್ವಾಗತವನ್ನು ಎಲ್ ಸಿ ಆರ್ ಪಿ ಸುನಿತಾ ಹಾಗೂ ಪಶುಸಖಿ ದೀಕ್ಷಿತಾ ವಂದಿಸಿದರು.