ಕೇರಳ ರಾಜ್ಯದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಸೆ-22 ರಿಂದ ಆರಂಭಗೊಂಡಿದ್ದು ಅ1ರ ತನಕ ಸಾಗಿ ಬರಲಿದ್ದು ಸೆ-27 ರಂದು ಇದೇ ವೇದಿಕೆಯಲ್ಲಿ ಸುಪ್ರಸಿದ್ಧ ಕವಿಗಳಾದ ಡಾ:ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ-2025 ನಡೆಯಲಿದೆ. ಈ ಕವಿಗೋಷ್ಠಿಯಲ್ಲಿ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರು ಸ್ವರಚಿತ ‘ಬಾಳು ಬಂಗಾರವಾಗಲಿ’ಶೀರ್ಷಿಕೆಯ ಕವನ ವಾಚಿಸಲಿದ್ದಾರೆ.

