ಉಡುಪಿ: ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಸಭೆ ನಡೆಸಿ 2025ನೇ ಸಾಲಿನ ಜಿಲ್ಲೆಯ ವಿವಿಧ ಸಾಂಪ್ರದಾಯಿಕ ಕಂಬಳಗಳಿಗೆ ದಿನ ನಿಗದಿ ಮಾಡಿದೆ. ಜಿಲ್ಲೆಯ 24 ಕಡೆಗಳ ಕಂಬಳಗಳ ದಿನಾಂಕ ನಿಗದಿಪಡಿಸಲಾಗಿದೆ. ಹಾಗೆಯೇ ಇತಿಹಾಸ ಪ್ರಸಿದ್ದ ವಂಡಾರು, ಚೇರ್ಕಾಡಿ, ವಡ್ಡಂಬೆಟ್ಟು ಯಡ್ತಾಡಿ, ಮುದ್ದುಮನೆ, ಹೆಗ್ಗುಂಜೆ, ತಲ್ಲೂರು, ಕಡ್ರಿ ಸಿದ್ದಾಪುರ, ನಡೂರು, ಕೊಡವೂರು, ಮಂಡಾಡಿ ಕಂಬಳಗಳ ದಿನಾಂಕವನ್ನು ಪ್ರತೀವರ್ಷದ ಸಂಪ್ರದಾಯದಂತೆ ಸಂಕ್ರಾಂತಿಯ ಅನಂತರ ನಿಗದಿಯಾಗಲಿದೆ ಎಂದು ಸಾಂಪ್ರದಾಯಿಕ ಕಂಬಳ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ ಹೆರಂಜೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ತಿಳಿಸಿದ್ದಾರೆ.
ನ. 21 -ಕೊಡೇರಿ, ನ. 25 – ಕೆರಾಡಿ, ನ. 27 – ಗುಳ್ಳಾಡಿ, ನ. 28 – ಬಾರ್ಕೂರು, ನ.30- ಕೆಂಜೂರು, ಹೆರಂಜೆ, ಅಲ್ಪಾಡಿ, ಡಿ.1 – ಮೂಡ್ಲಕಟ್ಟೆ ,ಡಿ. 2 – ಹೊಸ್ಮಠ, ಡಿ. 5 – ಬಿಲ್ಲಾಡಿ, ಡಿ. 6 – ಮೊಳಹಳ್ಳಿ ಹಂದಾಡಿ, ಡಿ. 7- ಹೊರ್ಲಾಳಿ, ತೋನ್ಸೆ, ವೋರ್ವಾಡಿ, ಡಿ. 9 ಚೋರಾಡಿ, ಕುಚ್ಚೂರು, ಡಿ. 10 – ಆತ್ರಾಡಿ, ತೆಗ್ಗರ್ಸೆ, ಡಿ. 11 – ಹೊಸೂರು, ಡಿ. 14 – ಬನ್ನಾಡಿ, ಕೊರ್ಗಿ, ಡಿ.25 – ಕಡಿಂತಾರ್

