ದಾವಣಗೆರೆ : 320 ಕ್ವಿಂಟಲ್ ಮೆಕ್ಕೆ ಜೋಳ ಬೆಂಕಿಗಾಹುತಿ

0
27

ದಾವಣಗೆರೆ: ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 4.75 ಲಕ್ಷ ರೂ. ಮೌಲ್ಯದ 320 ಕ್ವಿಂಟಲ್ ಮೆಕ್ಕೆ ಜೋಳ ಸುಟ್ಟು ಭಸ್ಮವಾಗಿರುವ ಘಟನೆ ದಾವಣಗೆರೆಯ ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೀರಬಸಪ್ಪ ಅವರಿಗೆ ಸೇರಿದ ಎರಡು ಎಕರೆಯಲ್ಲಿ ಬೆಳೆದ 70 ಕ್ವಿಂಟಲ್ ಮೆಕ್ಕೆ ಜೋಳಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು , 1 ಲಕ್ಷದ 25 ಸಾವಿರ ರೂ. ನಷ್ಟವಾಗಿದೆ. ಅದೇ ರೀತಿ ಗ್ರಾಮದ ಬಸಪ್ಪ ಅವರು ಎಂಟು ಎರೆಕ ಜಮೀನಿನಲ್ಲಿ 250 ಕ್ಚಿಂಟಾಲ್ ಮೆಕ್ಕೆ ಜೋಳ ಬೆಳೆದಿದ್ದು ಅದು ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು ಸುಮಾರು ಮೂರುವರೆ ಲಕ್ಷ ರೂ. ನಷ್ಟವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮದ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಷ್ಟಕ್ಕೊಳಗಾದ ರೈತರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

LEAVE A REPLY

Please enter your comment!
Please enter your name here