ದಾವಣಗೆರೆ: ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ (ರಿ) ದಾವಣಗೆರೆ ಇವರ ಆಶ್ರಯದಲ್ಲಿ ದೊಡ್ಡಪೇಟೆ ವಿರಕ್ತಮಠದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಬಸವ ಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮ ಆ. ೩೧ರಂದು ವಿರಕ್ತಮಠ, ದೊಡ್ಡಪೇಟೆ, ದಾವಣಗೆರೆ ಇಲ್ಲಿ ನಡೆಯಲಿದೆ.
ಡಾ. ಬಸವಪ್ರಭು ಸ್ವಾಮಿಗಳು ವಿರಕ್ತಮಠ, ದಾವಣಗೆರೆ ಅವರು ಸಾನಿಧ್ಯ ನೀಡಲಿದ್ದು, ಎ.ಎನ್. ಜಗದೀಶ್ ಸಹಾಯಕ ಪ್ರಾಧ್ಯಾಪಕರು, ಬಾಪೂಜಿ ಇಂಜಿನಿಯರಿಂಗ್ ಕಾಲೇಜು, ದಾವಣಗೆರೆ ಉದ್ಘಾಟನೆ ಮಾಡಲಿದ್ದಾರೆ.
ಎಸ್.ಜಿ. ವೇದಮೂರ್ತಿ ಉಪಾಧ್ಯಕ್ಷರು, ವೀರಶೈವ ಮಹಾಸಭಾ ಜಿಲ್ಲಾ ಘಟಕ, ದಾವಣಗೆರೆ ಅವರು ಅಧ್ಯಕ್ಷತೆ ವಹಿಸಲಿದ್ದು, ಹೆಚ್.ಎನ್. ಶಿವಕುಮಾರ್ , ಶಂಭು ಉರೇಕೊಂಡಿ, ರೋಷನ್ ಜಮೀರ್, ಎಸ್. ಸಿದ್ದೇಶ್ ಕುರ್ಕಿ ,ವಿನೋದ ಅಜಗಣ್ಣನವರ್, ಆರ್. ಚಂದ್ರಮ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Home Uncategorized ದಾವಣಗೆರೆ: ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಿಂದ ಮಕ್ಕಳಿಗೆಉಚಿತ ಪುಸ್ತಕ – ಹಾಲು ವಿತರಣೆ ಕಾರ್ಯಕ್ರಮ