ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಪ್ರಾರಂಭವಾಗಿ 25 ವರ್ಷಗಳು ಆಯಿತು. ಈ ಪ್ರಯುಕ್ತ ಜನವರಿ 18 ರಂದು ಭಾನುವಾರ ಬೆಳಿಗ್ಗೆ 7 ಗಂಟೆಗೆ ನಗರದ ಜಯದೇವ ವೃತ್ತದ ಹತ್ತಿರವಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಪರಿವಾರದ ಬೆಳ್ಳಿ ಹಬ್ಬ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರದ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಪರಿವಾರದ ಬೆಳ್ಳಿ ಹಬ್ಬ ಉದ್ಘಾಟನೆಗೊಳ್ಳಲಿದ್ದು, ಶ್ರೀ ಗಾಯತ್ರಿ ದೇವಿಯ ಸದ್ಭಕ್ತರು, ಆಧ್ಯಾತ್ಮಕ ಪರಂಪರೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪರಿವಾರದ ಬೆಳ್ಳಿ ಹಬ್ಬ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9845277088,9448979957, 9538732777 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು ಎಂದು ಪರಿವಾರದ ಕೋಶಾಧ್ಯಕ್ಷರಾದ ಪುರುಷೋತ್ತಮ ಡಿ.ಪಟೇಲ್ ಪ್ರಕಟಿಸಿದ್ದಾರೆ.

