ಕೊಯ್ಯೂರು ಹಿಂದೂ ರುದ್ರ ಭೂಮಿಯ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾಗಿ ದಯಾಮಣಿ ಪೆರ್ಮುದೆ, ಅಧ್ಯಕ್ಷರಾಗಿ ಯಶವಂತ ಗೌಡ ಪೂರ್ಯಾಳ, ಕಾರ್ಯದರ್ಶಿಯಾಗಿ ಪಿ. ಚಂದ್ರಶೇಖರ್ ಸಾಲ್ಯಾನ್ ಹರ್ಮಾಡಿ, ಕೋಶಾಧಿಕಾರಿಯಾಗಿ ಹೇಮಾವತಿ ಕಡಮ್ಮಾಜೆ ಆಯ್ಕೆ.

0
20


ಕೊಯ್ಯೂರು ಇಲ್ಲಿಯ ಆದೂರು ಪೇರಾಲ್ ಪರಿಸರದಲ್ಲಿ ಸುಮಾರು ಒಂದುವರೆ ಎಕ್ರೆ ಜಾಗವನ್ನು ಹಲವು ವರ್ಷಗಳ ಹಿಂದೆ ಹಿಂದೂ ರುದ್ರ ಭೂಮಿಗಾಗಿ ಮೀಸಲಿಡಲಾಗಿತ್ತು. ಆದೂರು ಪೇರಾಲ್ ಪರಿಸರದಲ್ಲಿ ಹಲವಾರು ಹಿಂದೂ ಕುಟುಂಬಗಳು ವಾಸವಾಗಿದ್ದು ಇಲ್ಲಿ ಯಾರಾದರೂ ಅಕಸ್ಮಾತ್ ಮೃತರಾದರೆ ಅವರ ಅಂತ್ಯ ಸಂಸ್ಕಾರಕ್ಕೆ ದೂರದ ಬೆಳ್ತಂಗಡಿಗೆ ಅಥವಾ ಬೇರೆ ಕಡೆಗೆ ಕೊಂಡು ಹೋಗುವುದನ್ನು ಮನಗಂಡಂತಹ ಗ್ರಾಮ ಪಂಚಾಯತ್ ಹಾಗೂ ಊರವರು ಇದನ್ನು ಅಭಿವೃದ್ಧಿಪಡಿಸಿ ಇಲ್ಲಿ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಇಲ್ಲಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಸದಸ್ಯರುಗಳ ಹಾಗೂ ಊರವರ ಸಭೆಯನ್ನು ನಡೆಸಿ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ ನೂತನವಾಗಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ದಯಾಮಣಿ ರವೀಂದ್ರನಾಥ್ ಪೇರ್ಮುದೆ, ಅಧ್ಯಕ್ಷರಾಗಿ ಯಶವಂತ ಗೌಡ ಪೂರ್ಯಾಳ, ಪ್ರಧಾನ ಕಾರ್ಯದರ್ಶಿಯಾಗಿ ಪಿ ಚಂದ್ರಶೇಖರ ಸಾಲ್ಯಾನ್ ಹರ್ಮಾಡಿ, ಕೋಶಾಧಿಕಾರಿಯಾಗಿ ಶ್ರೀಮತಿ ಹೇಮಾವತಿ ಕಡಮ್ಮಾಜೆ, ಉಪಾಧ್ಯಕ್ಷರುಗಳಾಗಿ ವೆಂಕಣ ಆದೂರು ಪೇರಾಲ್ ಮತ್ತು ಲೋಕೇಶ್ ಗೌಡ ಪಾಂಬೆಲು. ಕಾರ್ಯದರ್ಶಿಗಳಾಗಿ ಶ್ರೀ ಚಂದ್ರಶೇಖರ ಗೌಡ ಉಗ್ರೋಡಿ ಮತ್ತು ಹರೀಶ್ ಗೌಡ ಬಜಿಲ ಹಾಗೂ ಸಮಿತಿ ಸದಸ್ಯರುಗಳಾಗಿ 12 ಜನರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಯಮಣಿ ರವೀಂದ್ರನಾಥ್ ರವರು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಪ್ರಕಾಶ್, ಪಂಚಾಯತ್ ಕಾರ್ಯದರ್ಶಿ ಶ್ರೀ ಪರಮೇಶ್ವರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಗುಣಕರ ರೈ, ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಊರವರು ಹಾಜರಿದ್ದರು. ಪ್ರಾರಂಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here