ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಉಡುಪಿ ಇವರು ಯಕ್ಷಗಾನ ರಂಗದಲ್ಲಿ ಸಾಧನೆಗೈದ ಹಿರಿಯ ಕಲಾವಿದರಿಗೆ 28 ವರ್ಷ ಗಳಿಂದ ನೀಡುತ್ತಿರುವ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ -2026 ಗೆ ಹಿರಿಯ ಯಕ್ಷಗಾನ ಕಲಾವಿದ ದಯಾನಂದ ಬಳೆಗಾರ ನಾಗೂರು ಇವರು ಆಯ್ಕೆ ಯಾಗಿದ್ದಾರೆ.
ಶ್ರೀಯುತರು ಐದು ದಶಕಗಳ ಕಾಲ ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ,ಮಂದಾರ್ತಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಇವರ ಕಲಾಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ, ಮುಂದಿನ ತಿಂಗಳ ಫೆಬ್ರವರಿ ೦8 ರಂದು ಯಕ್ಷಗಾನ ಕಲಾಕ್ಷೇತ್ರ ದ 75 ನೇ ವಾರ್ಷಿಕೋತ್ಸವ ಸಮಾರಂಭ ದಂದು ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ದಯಾನಂದ ಬಳೆಗಾರ ನಾಗೂರು ಇವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

