ಹೊಳೆಯ ನೀರಿಗೆ ಕಾಫಿ ಪಲ್ಪರ್ ನೀರು ಬಿಟ್ಟು ಜಲ ಪ್ರಾಣಿಗಳು ಮರಣ ಹೊಂದಿದ್ದು ಹಾಗೂ ದನಾಕಾರರು ನೀರು ಕುಡಿದು ಅಪಾಯ ಸ್ಥಿತಿ ಹೊಂದುವ ಮೊದಲೇ ಯಾರು ಹೊಳೆಯ ನೀರಿಗೆ ಕಾಫಿ ಪಲ್ಪರ್ ನೀರು ಬಿಟ್ಟಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿಗಳಲ್ಲಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಪಂಚಾಯತಿಯ ವ್ಯಾಪ್ತಿಯ ಸೇರಿದ ಗೌಡಳ್ಳಿ ಗ್ರಾಮದ ಹೊಳೆಯಲ್ಲಿ ಕಾಫಿ ಪಲ್ಪರ್ ನೀರು ಬಿಟ್ಟು ಹೊಳೆಯಲ್ಲಿರುವ ಜಲ ಪ್ರಾಣಿಗಳು ಸತ್ತು ತೇಲುತ್ತಿದ್ದು ಕಾಫಿ ಪಲ್ಪರ್ ನಡೆಸುವವರಿಗೆ ಮಾನವೀಯತೆ ಇಲ್ಲದಂತಾಗಿದೆ ಹಾಗೂ ಇದೇ ನೀರನ್ನು ದನಕರುಗಳು ಸಹ ಕುಡಿಯಲಿದ್ದು ಅಪಾಯ ಸ್ಥಿತಿ ತಂದೊಡ್ಡಿದ್ದಾರೆ ಯಾರು ಈ ಹೊಳೆಗೆ ನೀರು ಬಿಟ್ಟಿದ್ದಾರೋ ಅಂತವರನ್ನು ಅಧಿಕಾರಿಗಳು ಕಂಡು ಹಿಡಿದು ಅವರಿಗೆ ಸರಿಯಾದ ಶಿಕ್ಷೆ ಕೊಟ್ಟು ಇನ್ನು ಮುಂದೆ ಆ ಕಾಫಿ ಪಲ್ಪರ್ ಓಪನ್ ಆಗದ ಹಾಗೆ ಮಾಡಿ ಸರಿಯಾದ ಶಿಕ್ಷೆ ಆಗಬೇಕೆಂದು ಕರವೇ ಮನವಿ ಪ್ರತಿವರ್ಷ ಇದೇ ತರ ಮಾಡಿಕೊಂಡು ಬರುತ್ತಿದ್ದಾರೆ ನಾವು ಈ ಹಿಂದೆ ಕೊಡಗು ಜಿಲ್ಲಾಧಿಕಾರಿಗಳಿಗೆ ವಾಟ್ಸಪ್ ಮುಖಾಂತರ ದೂರನ್ನು ಕೊಟ್ಟ ನಂತರ ಸಂಬಂಧಪಟ್ಟ ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳುತ್ತವೆ ಎಂದು ತಿಳಿಸಿ ಹೋದರು ಯಾವುದೇ ಪ್ರಯೋಜನ ಕಂಡಿಲ್ಲ ಪ್ರತಿವರ್ಷ ಇದೇ ತರ ಆಗುತ್ತಿದೆ ಇದಕ್ಕೆ ಯಾರು ಹೊಣೆ ಹಾಗಾಗಿ ಇದನ್ನು ಸರಿಪಡಿಸಿ ಇನ್ನು ಮುಂದೆ ಈ ಹೊಳೆಯ ನೀರಿಗೆ ಕಾಫಿ ಪಲ್ಪರ್ ನೀರು ಸೇರದಂತೆ ಮಾಡಬೇಕಾಗಿರುವ ಕೊಡಗು ಜಿಲ್ಲಾಧಿಕಾರಿಗಳಲ್ಲಿ ನಮ್ರತೆಯಿಂದ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ.. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯರ ಪ್ರಸನ್ನ ರವರು ಹಾಗೂ ಕರವೇ ಪ್ರಾಸಿಸ್ ಡಿಸೋಜ ಇದ್ದರು.

