ಮಂಗಳೂರು: 13.08.2025 ರಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾರವರು ಮಂಗಳೂರಿನ ಕೊಡಿಯಾಲಬೈಲ್ ಪ್ರದೇಶದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಅಳವಡಿಸಿರುವ ಜಾಮರ್ ನಿಂದ ನೆಟ್ ವರ್ಕ್ ಸಮಸ್ಯೆ, ನಗರದ ಮುಖ್ಯ ಭಾಗದಲ್ಲಿ ಜೈಲು ಇದ್ದು ಸುತ್ತಮುತ್ತ ಹಲವಾರು ವಸತಿ ಸಮುಚ್ಚಯಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳಿವೆ.
ಸುಮಾರು 1 ಕಿ.ಮೀ. ದೂರದಲ್ಲಿ ಜಿಲ್ಲಾ ನ್ಯಾಯಾಲಯವಿದೆ. ಕಾರಾಗೃಹದಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ಅನ್ ಲೈನ್ ಶಿಕ್ಷಣ, ಯು.ಪಿ.ಐ ನಿಂದ ಹಣ ಪಾವತಿಗೆ ತೊಂದರೆ ಹಾಗೂ ಕೋರ್ಟ್ ಕಲಾಪಗಳಿಗೂ ತುಂಬಾ ತೊಂದರೆಯಾಗಿರುವ ಬಗ್ಗೆ ಸದನದ ಶೂನ್ಯ ವೇಳೆಯಲ್ಲಿ ಮಾನ್ಯಸಭಾಪತಿಯವರ ಮೂಲಕ ಮಾನ್ಯ ಗೃಹ ಸಚಿವರ ಗಮನ ಸೆಳೆದರು.
