ಕ್ಷೀಣವಾಗುತ್ತಿರುವ ಪುಸ್ತಕ ಓದುವ ಹವ್ಯಾಸ : ಕುಂ.ವೀ.

0
18

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತಿದ್ದು, ಯಾರು ಚನ್ನಾಗಿ ಓದುತ್ತಾರೋ ಅವರು ಸಮಾಜವನ್ನು ಚನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಓದದವರು ಸಮಾಜ ದಿಂದೆ ದೂರ ಇರುತ್ತಾರೆ. ಮನುಷ್ಯ ಸಂಬAಧಗಳನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುವುದಿಲ್ಲ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲೆ ಸಮಾಚಾರ ಪತಿಯಿಂದ ಹಮ್ಮಿಕೊಂಡಿದ್ದ ‘ವರ್ಷದ ವ್ಯಕ್ತಿ-2025’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಭಾಟಿಸಿ; ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಸೋದರ ಸಂಬAಧಿ ರಾಜ್ಯಗಳಾಗಿವೆ. ಒಂದು ರಾಜ್ಯಕ್ಕೆ ಒಳಪಟ್ಟ ಪ್ರದೇಶಗಳಾಗಿವೆ. ಆಂಧ್ರದಲ್ಲೂ ಚಾಲುಕ್ಕರ ಶಾಸನಗಳನ್ನು ಸಹ ಕಾಣುತ್ತೇವೆ ಎಂದು ತಿಳಿಸಿದರು.

ವ್ಯಾಪಾರೀಕರಣ, ವಾಣಿಜ್ಯೀಕರಣ, ರಾಷ್ಟ್ರೀಕರಣದಂತಹ ಅಪಾಯಕಾರಿ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಮೊಬೈಲ್ ಇಲ್ಲದೇ ಬದುಕೇ ಇಲ್ಲ ಎನ್ನುವಂತಾಗಿದೆ. ಸಾಹಿತ್ಯ ಕೂಡ ಮೂಲೆ ಗುಂಪಾಗುತ್ತಿದೆ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದರು.

ಮಕ್ಕಳನ್ನು ಕೃಷಿಕರನ್ನಾಗಿ, ಯೋಧರನ್ನಾಗಿ ಮಾಡುವತ್ತ ಯಾರೂ ಚಿಂತಿಸುತ್ತಿಲ್ಲ. ಶಿಕ್ಷಣ ಪಡೆದ ವ್ಯಕ್ತಿಗಳೇ ತಮ್ಮ ತಂದೆ- ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಕೆಲಸ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ. ಮಕ್ಕಳಿಗೆ ಸಾಹಿತ್ಯ, ಸಾಹಿತಿಗಳನ್ನು ಪರಿಚಯಿಸುವ ಕೆಲಸ ‘ಮಾಡಬೇಕಾಗಿದೆ. ಮಕ್ಕಳ ಬಗ್ಗೆ ನಿಗಾ ಇಡಬೇಕೆಂದು ಕರೆ ನೀಡಿದರು.

ಪತ್ರಿಕೆ ಸಂಪಾದಕ ವಿ. ಹನುಮಂತಪ್ಪ ಓದುವ ಹವ್ಯಾಸವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿರುವ ವ್ಯಕ್ತಿ. ಅದ್ಭುತ ವ್ಯಕ್ತಿತ್ವವುಳ್ಳವರು. ಪ್ರಶಸ್ತಿಗೆ ಸೂಕ್ತ ಆಯ್ಕೆಯನ್ನೇ ಮಾಡಿದ್ದಾರೆ ಎಂದರು. ‘ವರ್ಷದ ವ್ಯಕ್ತಿ-2025’ ಪ್ರಶಸ್ತಿಗೆ ಪಾತ್ರರಾಗಿರುವ ಹಿರಿಯ ವೈದ್ಯ ಡಾ. ಬಿಎಸ್. ನಾಗಪ್ರಕಾಶ್ ಅವರದು ಸರಳ ವ್ಯಕ್ತಿತ್ವ, ವೈದ್ಯಕೀಯ ರಂಗದಲ್ಲಿ ಅವರ ಸೇವೆ ಅಮೋಘವಾದುದು, ಜನಮುಖಿ, ಸಮಾಜಮುಖಿ, ರೋಗಿಯ ಸೇವೆಯಲ್ಲಿ ತೊಡಗಿರುವ ಅವರ ಜನಪ್ರಿಯತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು.

ಜೆಜೆಎಂ ವೈದ್ಯಕೀಯ. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶುಕ್ಲಾಶೆಟ್ಟಿ ಮಾತನಾಡಿ, ಮೊಬೈಲ್ ಹಾವಳಿಯಿಂದಾಗಿ ಪತ್ರಿಕೆಗಳನ್ನು ಓದುವ. ಗೀಳು ಕಡಿಮೆಯಾಗುತ್ತಿದೆ. ಪ್ರತಿ ಮನೆಯಲ್ಲೂ ಪತ್ರಿಕೆ, ಪುಸ್ತಕಗಳ ಸಂಗ್ರಹ ಮತ್ತು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.

ಮಕ್ಕಳು. ಬರೀ ಮೊಬೈಲ್ ಬಳಕೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಪಠ್ಯಪುಸ್ತಕದ ಓದು ಕಡಿಮೆಯಾಗಿದೆ. ಎಲ್ಲವನ್ನೂ ಮೊಬೈಲ್‌ನಲ್ಲಿ ನೋಡುವಂತಾಗಿದೆ. ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದುವ ರೂಢಿ ತಪ್ಪಿ ಹೋಗುತ್ತಿದೆ, ಪುಸ್ತಕ, ಪತ್ರಿಕೆಗಳಲ್ಲಿ ಸಿಗುವ ಸತ್ವ ಮೊಬೈಲ್‌ನಲ್ಲಿ ಸಿಗುವುದಿಲ್ಲ. ಹಿರಿಯರಾದವರು ಮೊಬೈಲ್ ಬಿಡಿಸಿ, ಪುಸ್ತಕ ಕೊಡುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸಬೇಕಾಗಿದೆ ಎಂದರು.

ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ, ಎಆರ್‌ಜಿ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಬಿ. ಬೋರಯ್ಕ ಮಾತನಾಡಿದರು. ಹಿರಿಯ ವಕೀಲ ರಾಮಚಂದ್ರ ಕಲಾಲ್ ಅಧ್ಯಕ್ಷತೆ ವಹಿಸಿದ್ದರು.

ಸಂಗೀತ ಶಿಕ್ಪಕಿ ರುದ್ರಾಕ್ಷಿ ಬಾಯಿ ಪುಟ್ಟಾನಾಯ್ಕ ಪ್ರಾರ್ಥಿಸಿದರು. ಜಿಲ್ಲಾ ಸಮಾಚಾರ ಸಂಸ್ಥಾಪಕ ಸಂಪಾದಕ ವಿ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಸಂಚಾಲಕ ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು. ಸತ್ಯಭಾಮ ಮಂಜುನಾಥ್ ಸ್ವಾಗತಿಸಿದರು. ಪತ್ರಿಕೆಯ ಉಪ ಸಂಪಾದಕರಾದ ಭಾರತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here