08-03-2026ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದ್ದು. ನಮ್ಮನ್ನು ನಾವೇ ಗುರುತಿಸಿಕೊಂಡು ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರಬೇಕಿದೆ ಆಗ ಸ್ತ್ರೀ ಕುಲಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ಸಾಧನೆಗೆ ಶ್ರದ್ದೆ, ಆಸಕ್ತಿ ಮುಖ್ಯ ಅದಕ್ಕೆ ಉದಾಹರಣೆ ಎಂದರೆ ನಮ್ಮ ಟ್ರಸ್ಟ್ ನ ಸದಸ್ಯರಾದ ಕು. ಪೂರ್ಣಿಮಾ ಹೆಚ್ ಬಿ . ವಿಶೇಷ ಚೇತನರಾದರು ಸಾಹಿತ್ಯದ ಬಗ್ಗೆ ಆಸಕ್ತಿವಹಿಸಿ ‘ಮನ ಮಿಡಿದಾಗ’ ಕೃತಿಯನ್ನು ಹೊರತಂದು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸುತ ವಿಶೇಷ ಚೇತನ ಬರಹಗಾರ್ತಿಯಾಗಿ ಹೆಸರುವಾಸಿಯಾಗಿದ್ದಾರೆ.
ಇಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದು “ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ” ಕರ್ನಾಟಕ ದ ಕಾರ್ಯವಾಗಿದೆ. ಇಂಥವರು ಹಲವರಿಗೆ ಪ್ರೋತ್ಸಾಹದಾಯಕರಾಗಿದ್ದಾರೆ ಎಂದು ಟ್ರಸ್ಟ್ ನ ಸದಸ್ಯರಾಗಿ ನಮ್ಮೊಂದಿಗೆ ಇರುವುದು ನಮಗೆ ಸಂತಸ ತಂದಿದೆ. ಇವರನ್ನು ಗೌರವಿಸಿ ಸನ್ಮಾನಿಸುತ್ತಿರುವುದು ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳಿಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಟ್ರಸ್ಟ್ ನ ಸಂಸ್ಥಾಪಕರಾದ ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು.
ಪ್ರತಿಮಾ ಹಾಸನ್ ರವರನ್ನು ಬಹಳ ವರ್ಷಗಳಿಂದ ಭೇಟಿಯಾಗಬೇಕೆಂಬ ಹಂಬಲದಲ್ಲಿದ್ದ ನಾನು ಹಲವಾರು ಸಂದರ್ಭಗಳಲ್ಲಿ ಭೇಟಿಯಾಗುವ ಸಮಯ ಬಂದರು ಭೇಟಿಯಾಗಲು ಆಗುತ್ತಿರಲಿಲ್ಲ. ಅವರು ನನ್ನನ್ನು ಭೇಟಿ ಮಾಡಿದ್ದೆ ದೊಡ್ಡ ಸನ್ಮಾನ ಸಿಕ್ಕಿದಂತೆ ಆಗಿದೆ. ನಾನು ಅವರನ್ನು ನೋಡಬೇಕೆಂದು ಬಯಸಿದ್ದೆ.ಅವರ ಭೇಟಿ ಬಹಳ ಖುಷಿಯಾಗಿದ್ದು. ಸನ್ಮಾನಕ್ಕಿಂತ ಸಂತಸ ತಂದಿದೆ.
ಯುವ ಪೀಳಿಗೆಯಲ್ಲಿ ನನ್ನ ಮನವಿಯೇನೆಂದರೆ ಯಾವುದೇ ದ್ವೇಷ ಅಸೂಯೆಗಳನ್ನು ಮಾಡದೆ ಸಮಯ ಸಿಕ್ಕಾಗ ಸಾಹಿತ್ಯದ ಕಡೆ ಗಮನವಯಿಸಿ ಎಂದು ಹಾಗೂ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನನ್ನನ್ನು ಸನ್ಮಾನಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಕು. ಪೂರ್ಣಿಮಾ ಹೆಚ್. ಬಿ. ತಿಳಿಸಿದರು. ಮೋಹಲ್ ಗೌಡ. ಕೆ ಆರ್. ಇನ್ನೂ ಹಲವರು ಉಪಸ್ಥಿತರಿದ್ದರು.

