ರುಡ್ ಸೆಟ್ ಆಸರೆ ಬಸ್ಸು ತಂಗುದಾಣ ಶಾಸಕರಿಂದ ಲೋಕಾರ್ಪಣೆ

0
15

ಬ್ರಹ್ಮಾವರ ರುಡ್ ಸೆಟ್ ಆಸರೆ ಸಂಘಟನೆ ಇದರ 20ನೇ ವರ್ಷದ ಸವಿ ನೆನಪಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ರುಟ್ ಸೆಟ್ ಕ್ರಾಸ್ ಬಳಿ  ನೂತನವಾಗಿ ನಿರ್ಮಿಸಿರುವ ಬಸ್ಸು ತಂಗುದಾಣದ ಲೋಕಾರ್ಪಣೆಯನ್ನು ಮಾನ್ಯ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ  ಸುವರ್ಣ ಅವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. 

 ಉಡುಪಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್ ಕೆ ಅವರು ಬಸ್ಸು ತಂಗುದಾಣದ  ಶಿಲಾಫಲಕ ಅನಾವರಣಗೊಳಿಸಿದರು. ನಂತರ ನಡೆದ ಸಭೆಯಲ್ಲಿ ಮಾತನಾಡಿದ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ  ಗಂಗಾಧರ್  ಎಚ್ ಕೆ ಮಾತನಾಡಿ ಆಸರೆ ಸಂಘಟನೆಯ ಈ ಸಮಾಜಮುಖಿ ಕಾರ್ಯ ಮಾದರಿಯಾಗಿದೆ ಇದೇ ರೀತಿ ಅನೇಕ ಸಮಾಜ ಮುಖಿ  ಕಾರ್ಯಗಳನ್ನು  ಸಂಘಟನೆಯಿಂದ ನಡೆಸುವಂತಾಗಲಿ ,ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೆನರಾ ಬ್ಯಾಂಕ್ ಸದಾ  ನಿಮ್ಮ ಜೊತೆಗೆ ಇರುತ್ತದೆ ಎಂದು ಸಭೆಯನ್ನು ಉದ್ದೇಶಿಸಿ ಮಾತುಗಳನ್ನು ಅಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಣಿ ಅಜಯ್ ರಾವ್ ಅಧ್ಯಕ್ಷರು ಆಸರೆ ಸಂಘಟನೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಉಪ ಮಹಾ ಪ್ರಬಂಧಕರಾಗಿರುವ ಮಹಾಮಾಯ ಪ್ರಸಾದ್ ರಾಯ್   ಅತಿಥಿಯಾಗಿ ಬ್ರಹ್ಮವಾರ  ರುಡ್ ಸೆಟ್ ಸಂಸ್ಥೆ ಯ  ನಿರ್ದೇಶಕರಾಗಿರುವ ಡಾ. ಬೊಮಯ್ಯ ಎಂ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಇದರ ಕ್ಷೇತ್ರ ಯೋಜನಾಧಿಕಾರಿ ಯವರಾಗಿರುವ ರಮೇಶ್ ,  ಕರುಣಾಕರ ಜೈನ್ ಹಿರಿಯ ಉಪನ್ಯಾಸಕರು ರುಡ್ ಸೆಟ್ ಸಂಸ್ಥೆ ಸಿದ್ದವನ ಉಜಿರೆ, ಸ್ಥಳದಾನಿಗಳಾದ ಮಂದಾರ ಶೆಟ್ಟಿ , ಬ್ರಹ್ಮವಾರ ರುಡ್ ಸೆಟ್ ಸಂಸ್ಥೆಯ  ಉಪನ್ಯಾಸಕರಾಗಿರುವ ಸಂತೋಷ್ ಶೆಟ್ಟಿ  ಹಾಗೂ ಚೈತ್ರ , ಕೆನಾರ ಬ್ಯಾಂಕ್ ವಾರಂಬಳಿ ಶಾಖೆಯ ಅಮೀತ್ , ಕೆನಾರ ಬ್ಯಾಂಕಿನ ಅಜೇಯ್ ಯವರು  ಅತಿಥಿಗಳಾಗಿ ಭಾಗವಹಿಸಿದರು.  ಆಸರೆಯ ಮಾಜಿ ಅಧ್ಯಕ್ಷರಾದ ಕೆ.ಸಿ ಅಮಿನ್ ಅತಿಥಿಗಳನ್ನು ಸ್ವಾಗತಿಸಿದರು ,ಹಾಗೂ ಆಸರೆ ಸಂಘಟನೆಯ ಗೌರವಾಧ್ಯಕ್ಷರಾದ ರಾಜೇಶ್ ಡಿ ಬ್ರಹ್ಮಾವರ ಪ್ರಸ್ತಾವನೆಯನ್ನಗೈದರು. ಈ ಸಂದರ್ಭದಲ್ಲಿ ಆಸರೆಯ ಕೋಶಾಧಿಕಾರಿ ವೆಂಕಟೇಶ್ ನಾಯ್ಕ , ಉಪಾಧ್ಯಕ್ಷರಾದ  ರಾಜಲಕ್ಷ್ಮಿ, ಸಂಘಟನಾ ಕಾರ್ಯದರ್ಶಿ ಉಮೇಶ್ ನಾಯಿರಿ, ಕಮಲ ಕೆ.ಸಿ ಅಮಿನ್  ,  ಗೌರವ ಶಿಕ್ಷಕಿ ಸುಮತಿ ಸುವರ್ಣ, ಮಾಜಿ ಅಧ್ಯಕ್ಷರಾದ ಕಿಶ್ವರಿ  ಜಹಾನ್  ಹಾಗೂ  ಶಕೀಲಾ ಹೆಗ್ಡೆ, ಪಧಾಧಿಕಾರಿಗಳಾದ ಉಮೇಶ್ ಆಲ್ತಾರು ಪ್ರಶಾಂತ್ ಕಟಪಾಡಿ , ನಾಗರತ್ನ ಆಚಾರ್ಯ, ಸುಮಂಗಲ ಅಂಬಾಗಿಲು ,ಗಂಗಾಧರ ಆಚಾರ್ಯ , ರಾಮಚಂದ್ರ ಅಚಾರ್ಯ,ಕಚೇರಿ ಸಹಾಯಕರಾದ ರವಿ ಸಾಲಿಯಾನ್ , ಶಾಂತಪ್ಪ ,ಪೃಥ್ವಿರಾಜ್, ಅರುಣ್ , ಸಂತೊಷ್    ಅಸರೆ ಸದಸ್ಯರಾದ ಪ್ರವೀಣ್ ಮಲ್ಪೆ,  ರಾಗೀಣಿ ಚೆರ್ಕಾಡಿ,ವಿಶ್ವಾಸ್ ಕಾಂಚನ್ ,ಶಶಿಕಲಾ ದೇವಾಡಿಗ ,ಸುಗುಣ ಆಚಾರ್ಯ,  ಲೇಖಾರಾಜ್ , ಶಿಕ್ಷಕಿ ವೀಣಾ ,ವಿದ್ಯಾ, ಪ್ರಕಾಶ್ ಆಚಾರ್ಯ, ಸುಜ್ಯೋತಿ ಅಂಬಾಲಪಾಡಿ, ಮನೋರಮ ಶೆಟ್ಟಿ ,ಯೋಗ ಶಿಕ್ಷಕಿ  ಪ್ರಿಯಾಂಕ ,  ವಿಜಯ ಲಕ್ಷೀ,  ಭರತ್ ಅಚಾರ್ಯ ಪಂದುಬೆಟ್ಟು,  ದಿವ್ಯಜ್ಯೋತಿ ರಾಧಾಕೃಷ್ಣ ಆಚಾರ್ಯ,  ಅಶಾ ಪ್ರಾಣೇಶ್   ಸುಮತಿ, ಮಹೇಶ್ ಅಲ್ತಾರು,  ಸ್ಥಳೀಯರದ ರತ್ನಾಕರ ಮೊಗವೀರ ,ಹಾಗೂ ರುಡ್ ಸೆಟ್ ನ ವಿದ್ಯಾರ್ಥಿಗಳು ಆಸರೆ ಸಂಘಟನೆಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು  ಕುಶಕುಮಾರ್ ಬನ್ನಾಡಿ ಅತಿಥಿಗಳಿಗೆ ಧನ್ಯವಾದ ಕೋರಿದರು, ಸೂರಜ್ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here