ಪಾರ್ಥಸಾರಥಿ ಸುವರ್ಣರಥ ಸಮರ್ಪಣೆ

0
67

ಉಡುಪಿ: ಕೋಟಿ ಗೀತಾ ಲೇಖನ ಯಜ್ಞ ಹಾಗೂ ಸನ್ಯಾಸ ಜೀವನದ ಸುವರ್ಣ ವರ್ಷಾಚರಣೆ ಸ್ಮರಣಾರ್ಥ ಗೀತಾಚಾರ್ಯ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣರಥವನ್ನು ಡಿ.27ರಂದು ಸಮರ್ಪಿಸಲಾಗುತ್ತಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಡಿ.26ರಂದು ಮಧ್ಯಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸುವರ್ಣ ರಥದ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ರಾಜಾಂಗಣದಲಿ ಧರ್ಮ ಸಭೆ ನಡೆಯಲಿದೆ. ಡಿ. 27ರಂದು ಸಂಜೆ 6ಕ್ಕೆ ರಥಬೀದಿಯಲ್ಲಿ ಪಾರ್ಥಸಾರಥಿ ಸ್ವರ್ಣರಥದಲ್ಲಿ ಶ್ರೀಕೃಷ್ಣನ ಉತ್ಸವಕ್ಕೆ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
28ಕ್ಕೆ ಕೋಟಿ ತುಳಸಿ ಅರ್ಚನೆ
ತಾಲೂಕು ಬ್ರಾಹ್ಮಣ ಸಂದ ಅಧ್ಯಕ್ಷ ಶ್ರೀಕಾಂತ್​ ಉಪಾಧ್ಯಾಯ ಮಾತನಾಡಿ, ಡಿ.28ರಂದು ಬೆಳಗ್ಗೆ 9 ಗಂಟೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ 26 ವಲಯಗಳ ಸುಮಾರು 2000 ವಿಪ್ರ ಬಾಂಧವರೊಂದಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ. ಬೆಂಗಳೂರು, ಮೈಸೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ತುಳಸಿಯನ್ನು ತರಿಸಲಾಗಿತ್ತಿದೆ ಎಂದರು.
ಪುತ್ತಿಗೆ ಮಠ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಬ್ರಾಹ್ಮಣ ಸಭಾದ ಶ್ರೀನಿವಾಸ ಬಲ್ಲಾಳ್​, ರಾಜೇಂದ್ರ, ನಾಗರಾಜ ಉಪಾಧ್ಯಾಯ, ಹಯವದನ ಭಟ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here