ಮಂಗಳೂರು;ಭೂಮಿಯ ಮೇಲೆ ಸೂರ್ಯನ( ನೆರಳಾತೀತ ವಿಕಿರಣ )ವಿಷ ಕಿರಣಪ್ರವೇಶದಂತೆ ನಮ್ಮನ್ನು ರಕ್ಷಿಸುತ್ತಿರುವ ಓಜೋನ್ ಪದರಕ್ಕೆ ಹಾನಿಯಾಗುತ್ತಿದೆ.
ಇದಕ್ಕೆ ಹಸಿರು ಪರಿಸರ ನಾಶ ಒಂದು ಪ್ರಮುಖ ಕಾರಣ.ಇದನ್ನು ತಡೆಯಲು ಕಾಡು ಬೆಳೆಸಬೇಕಾಗಿದೆ.ಹಸಿರು ಪರಿಸರವ ನ್ನು ಸಂರಕ್ಷಿಸ ಬೇಕಾಗಿದೆ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಆರ್.ಕೆ. ನಾಯರ್ ತಿಳಿಸಿದ್ದಾರೆ.
ಅವರು ನಗರದ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ,ಸ್ವಸ್ತಿಕಾ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಊರ್ವ,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಇದರ ವತಿಯಿಂದ ಹಮ್ಮಿಕೊಂಡ ಪರಿಸರ ಸಂರಕ್ಷಣೆ ಮೈ ಪ್ಲಾನೆಟ್ ಮೈ ಪ್ರೈಡ್ ವಿಷಯದ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಬೇಸಗೆ ಬಿಸಿ ಹೆಚ್ಚುತ್ತಿರುವುದು, ಹವಾಮಾನ ಬದಲಾವಣೆ ಎಲ್ಲಾ ವೈಪರೀತ್ಯ ಗಳಿಗೂ ಹಸಿರು ಪರಿಸರ ನಾಶವಾಗುತ್ತಿ ರುವುದಕ್ಕೂ ನಿಕಟ ಸಂಬಂಧ ಇದೆ. ಪ್ರಕೃತಿ ತನ್ನ ಸಂರಕ್ಷಣೆ ಗಾಗಿ ತನ್ನದೆ ಆದ ವ್ಯವಸ್ಥೆ ನಿರ್ಮಿಸಿದೆ.ಈ ಬಗ್ಗೆ ಅರಿವಿನ ಕೊರತೆ ಯಿಂದ ನಾವು ನಮಗೆ ಅಪಾಯವನ್ನು ತಂದುಕೊಳ್ಳುತ್ತಿದ್ದೇವೆ. ಭೂಮಿಯ ಮೇಲೆ ಸೂರ್ಯನ ವಿಷ ಕಿರಣಪ್ರವೇಶದಂತೆ ಇರುವ ಓಜೋನ್ ಪದರ ನಮಗೆ ಮಳೆ ಬಿಸಿಲಿನಿಂದ ರಕ್ಷಿಸುವ ಕೊಡೆಯ ರೀತಿ ಇದೆ. ಪರಿಸರ ಹಾನಿ,ಕಾಡು ನಾಶವಾಗಿರುವ ಪ್ರದೇಶದಲ್ಲಿ ಅದಕ್ಕೆ ಹಾನಿ ಯಾಗಿದೆ. ಈ ವಿಷ ಕಿರಣಗಳು ಭೂಮಿ ಯನ್ನು ಪ್ರವೇಶಿಸಿದರೆ ಮನುಷ್ಯರಿಗೆ ಅಪಾಯವನ್ನುಂಟು ಮಾಡುತ್ತದೆ.ಅದರ ರಂಧ್ರ ವನ್ನು ಸರಿಪಡಿಸಲು ಹಸುರು ಪರಿಸರದ ಸಂರಕ್ಷಣೆ, ಪರಿಸರ ಸಮತೋಲನದ ಕೆಲಸಗಳನ್ನು ನಾವು ಜೊತೆಯಾಗಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಆರ್ ಕೆ ನಾಯರ್ ತಿಳಿಸಿದ್ದಾರೆ.
ಉದಾಹರಣೆಗೆ ಎರೆಹುಳು ತನ್ನ ಕೆಲಸ ಮಾಡುತ್ತದೆ.ಮಣ್ಣನ್ನು ಫಲವತ್ತಾಗಿ ಮಾಡುತ್ತದೆ.ಅದೇ ರೀತಿ ಪರಿಸರ ಸಂರಕ್ಷಣೆ ನಮ್ಮ ಮೊದಲ ಆಧ್ಯತೆಯಾಗಬೇಕು.ಓದು ಮುಖ್ಯವಲ್ಲ, ಜ್ಞಾನ ಸಂಪಾದನೆ ಮುಖ್ಯ ಎಂದು ಆರ್ ಕೆ ನಾಯರ್ ವಿವರಿಸಿದರು.
ಸಮಾರಂಭದಲ್ಲಿ ಸ್ವಸ್ತಿಕ್ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಇದರ ಅಧ್ಯಕ್ಷ ರಾಘವೇಂದ್ರ ಹೊಳ್ಳ,ಪ್ರಾಂಶುಪಾಲೆ ಮಾಲಿನಿ ಹೆಬ್ಬಾರ್ ,ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾಸ್ವಸ್ತಿಕಾ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಘಟಕದ ಸಂಯೋಜಕಿ ವಿದ್ಯಾ ಲಕ್ಷ್ಮೀ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಉಪಾಧ್ಯಕ್ಷ ಭಾಸ್ಕರ ರೈ ಕೆ,ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ , ಕಾರ್ಯ ಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಮೊದಲಾದವರು ಉಪಸ್ಥಿತ ರಿದ್ದರು.ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.