ದೇವಾಡಿಗ ವಧು-ವರರ ನೋಂದಣಿ ಮತ್ತು ಅನ್ವೇಷಣಾ ಕಾರ್ಯಕ್ರಮ

0
19

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ), ಪಾವಂಜೆ ಮಹಿಳಾ ವೇದಿಕೆ, ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ದೇವಾಡಿಗ ವಧು-ವರರ ವೇದಿಕೆ ಆಶ್ರಯದಲ್ಲಿ ಅ. 26ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ 9.00 ರಿಂದ ದೇವಾಡಿಗ ಸಮುದಾಯ ಭವನ, ಹಳೆಯಂಗಡಿಯಲ್ಲಿ ಪಾವಂಜೆ ಸೋಮನಾಥ ದೇವಾಡಿಗರ ಸಂಸ್ಮರಣೆಯೊಂದಿಗೆ ವಧು ವರರ ನೋಂದಣಿ ಮತ್ತು ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ. .

ಸೂಚನೆ : * ಈ ಕಾರ್ಯಕ್ರಮಕ್ಕೆ ಮದುವೆ ಸಿದ್ಧತೆಯಲ್ಲಿರುವ ಹುಡುಗ-ಹುಡುಗಿಯರು ತಮ್ಮ ಹೆತ್ತವರು/ಪೋಷಕರ ಜೊತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

* ಆಸಕ್ತ ಹುಡುಗ-ಹುಡುಗಿಯರು 6″x4″ ಭಾವಚಿತ್ರದ ಜೊತೆ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಭಾಗವಹಿಸತಕ್ಕದ್ದು.

* ವಧು ವರರ ನೋಂದಣಿ ಹಾಗೂ ಅನ್ವೇಷಣಾ ಕಾರ್ಯಕ್ರಮದ ಬಳಿಕ ಹೊಂದಾಣಿಕೆ ಯಾದಲ್ಲಿ ಸಂಬಂಧಿತರ ಮೊಬೈಲ್ ಸಂಖ್ಯೆ ಪಡೆದು ತಾವೇ ವ್ಯವಹಾರ ನಡೆಸತಕ್ಕದ್ದು. ಮುಂದಿನ ಹೆಜ್ಜೆಯಲ್ಲಿ ಸಂಘದ ಯಾವ ಪಾತ್ರವೂ ಇರುವುದಿಲ್ಲ.

* ಸಂಘದಲ್ಲಿ ಸ್ಥಾಪಿಸಲ್ಪಟ್ಟ ವಧು ವರರ ವೇದಿಕೆ ಸಂಘದ ಕಛೇರಿಯಲ್ಲಿ 2ನೇ ಶನಿವಾರ 6 ಮತ್ತು 4ನೇ ಶನಿವಾರ ಸಂಜೆ 4.00 ರಿಂದ 7.30ರ ವರೆಗೆ ತೆರೆದಿದ್ದು, ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು : 9980440643, 9449385730, 7338441478, 9980105625

LEAVE A REPLY

Please enter your comment!
Please enter your name here