ಪ್ರಾಥಮಿಕ ಹಂತದಲ್ಲಿ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡಾಗ ಕೆಟ್ಟ ಚಟಗಳಿಗೆ ದಾಸರಾಗುವುದು ತಪ್ಪುತ್ತದೆ – ಯಾಶಿರ್ ಕಲ್ಲಡ್ಕ

0
5

ಕಲ್ಲಡ್ಕ : ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಉತ್ತಮ ಹವ್ಯಾಸಗಳನ್ನು ಬೆಳೆಸುವ ಮೂಲಕ ಪುರಾತನ ಕಾಲದ ವಸ್ತುಗಳ ಸಂಗ್ರಹಣೆ ಹಾಗೂ ಮುಂದಿನ ಪೀಳಿಗೆಗೆ ಅವುಗಳ ಮಹತ್ವವನ್ನು ತಿಳಿಯುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡಾಗ ಕೆಟ್ಟ ಚಟಗಳಿಗೆ ದಾಸರಾಗುವುದು ತಪ್ಪುತ್ತದೆ ಮತ್ತು ಉತ್ತಮ ಬಾಂಧವ್ಯದ ಜೊತೆ ಒಳ್ಳೆಯ ನಾಗರಿಕರಾಗುವುದರಲ್ಲಿ ನಮ್ಮ ಹವ್ಯಾಸಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ಕಲ್ಲಡ್ಕ ಮ್ಯೂಸಿಯಂ ಮಾಲಕ ಯಾಶಿರ್ ಕಲ್ಲಡ್ಕ ಹೇಳಿದರು.

ಅವರು ವೀರಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಇಕೋ ತಂಡದ ಮಕ್ಕಳಿಗೆ ತನ್ನ ಮ್ಯೂಸಿಯಂನಲ್ಲಿ ವಿವಿಧ ವಸ್ತುಗಳ ಸಂಗ್ರಹ ವನ್ನು ಮಕ್ಕಳಿಗೆ ಪರಿಚಯಿಸಿ ಮಾತನಾಡಿದರು.

ನಂತರ ಇಕೋ ಕ್ಲಬ್ಬ್ ತಂಡದ ಸದಸ್ಯರು ಕಲ್ಲಡ್ಕದ ಪೂಲಿ೯ಪ್ಪಾಡಿ ಎಂಬಲ್ಲಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಕಸದ ವಿಂಗಡಣೆಯಾಗುವ ರೀತಿ ಹಸಿ ಕಸವನ್ನು ಗೊಬ್ಬರವನ್ನಾಗಿ ತಯಾರಿಸುವುದು ಒಣ ಕಸವನ್ನು ವಿವಿಧ ವಿಂಗಡನೆಗಳಾಗಿ ಮಾಡುವ ರೀತಿಯನ್ನು ವೀಕ್ಷಿಸಿ ತಮ್ಮ ನಿತ್ಯ ಜೀವನದಲ್ಲಿಯೂ ಕಸದ ವಿಲೇವಾರಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷೆಕಿಯರಾದ ಸಂಗೀತಾ ಶರ್ಮಾ ಪಿ ಜಿ, ಸಂಪ್ರಿಯಾ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here