ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ಅಭಿವೃದ್ಧಿ ಕಾಮಗಾರಿ – ಸ್ಥಳ ಪರಿಶೀಲನೆ ನಡೆಸಿದ ಹರೀಶ್ ಪೂಂಜ

0
13

ಮೊಗ್ರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕನಸಿನ ಯೋಜನೆ ಪುತ್ತೂರು -ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲನೆ, ಸ್ಥಳಕ್ಕೆ ಭೇಟಿ ನೀಡಿದರು.

ಯೋಜನೆಯ ಮುಖ್ಯಾಂಶಗಳು

ವ್ಯಾಪ್ತಿ : ಈ ಯೋಜನೆಯಿಂದ ಸುಮಾರು 16 ಗ್ರಾಮಗಳ 1,100 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

ಸಂಪರ್ಕ ಸೇತುವೆ: ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆಯು ಮುಗೇರಡ್ಕದಿಂದ ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿಗೆ ನೇರ ಸಂಪರ್ಕ ಕಲ್ಪಿಸುತ್ತದೆ

ಯೋಜನೆಯ ಪ್ರಯೋಜನಗಳು

ಕೃಷಿ ಅಭಿವೃದ್ಧಿ : ಮುಗೇರಡ್ಕ ಮಾತ್ರ ವಲ್ಲದೆ ಸುತ್ತಮುತ್ತಲಿನ ಹಲವಾರು ಗ್ರಾಮದ ರೈತರ ಜಮೀನುಗಳಿಗೆ ವರ್ಷವಿಡೀ ನೀರಿನ ಸೌಲಭ್ಯ ದೊರೆಯಲಿದ್ದು, ಕೃಷಿ ಚಟುವಟಿಕೆಗಳಿಗೆ ವೇಗ ಸಿಗಲಿದೆ.

ಪ್ರಯಾಣದ ಸಮಯ ಉಳಿತಾಯ : ನೇತ್ರಾವತಿ ನದಿಯ ಪುತ್ತೂರು – ಬೆಳ್ತಂಗಡಿ ತಾಲೂಕಿನ ಎರಡೂ ದಂಡೆಗಳ ಜನರಿಗೆ ಹೊಸ ಸೇತುವೆಯಿಂದಾಗಿ ಪ್ರಯಾಣದ ದೂರ ಮತ್ತು ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.

ಅಂತರ್ಜಲ ವೃದ್ಧಿ : ಕಿಂಡಿ ಅಣೆಕಟ್ಟು ಮಾದರಿಯ ಈ ಯೋಜನೆಯಿಂದಾಗಿ ಸುತ್ತಮುತ್ತಲಿನ ಭಾಗಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲು ಸಹಕಾರಿಯಾಗುತ್ತದೆ.

ಈ ಸಂದರ್ಭದಲ್ಲಿ ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮುಗೇರಡ್ಕ,ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ನಿರ್ದೇಶಕರಾದ ಪ್ರಭಾಕರ ಗೌಡ ಗುತ್ಯೋಡಿ, ಬಂದಾರು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಬಂದಾರು ಪಂಚಾಯತ್ ಮಾಜಿ ಸದಸ್ಯರಾದ ಶಿವಪ್ರಸಾದ್ ಗೌಡ ಸುದೆಪ್ಪಿಲ,ಮುಗೇರಡ್ಕ ಮೂವರು ದೈವಸ್ಥಾನ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ, ಹಿರಿಯರಾದ ರಾಮಣ್ಣ ಗೌಡ ವೈ ಏರ್ಮಾಳ,ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಬಂದಾರು,ಪ್ರವೀಣ್ ಮತ್ತಿಲಾರು, ಅಶೋಕ ಗೌಡ ಬರುoಗುಡೆಲು, ಜಗದೀಶ್ ಗೌಡ ಅರ್ಬಿ,ಇಲಾಖಾ ಅಧಿಕಾರಿಗಳು, ಗುತ್ತಿಗೆದಾರರು, ಹಲವಾರು ಪ್ರಮುಖರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here