ನಾಗರಮುನ್ನೋಳಿ : ಕವಿತ್ತ ಕರ್ಮಣಿ ಫೌಂಡೇಶನ್ ನ ಸಂಚಾಲಕ ಮಂಡಳಿಯು ಕಾರ್ಕಳದ ನೀರೆ ಬಾದಾಮಿಕಟ್ಟಿಯ ಖ್ಯಾತ ಶಿಲ್ಪಕಲಾವಿದರಾದ ಧನುಷ್ ಅಚಾರ್ಯ ಅವರನ್ನು ಕಲಾ ವಿಭೂಷಣ ಪ್ರಶಸ್ತಿ–2026ಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ, ಭಾಷೆ, ನೆಲ–ಜಲ ಸಂರಕ್ಷಣೆ, ಸಂಸ್ಕೃತಿ, ಸಂಗೀತ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಗಣನೀಯ ಸೇವೆ, ಸಾಧನೆ, ಜ್ಞಾನ ಮತ್ತು ಸಮರ್ಪಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ಪುರಸ್ಕಾರವನ್ನು ದಿನಾಂಕ 25 ಜನವರಿ 2026ರಂದು ಕವಿತ್ತ ಕರ್ಮಣಿ ಫೌಂಡೇಶನ್ (ರಿ), ನಾಗರಮುನ್ನೋಳಿ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಪ್ರದಾನ ಮಾಡಲಾಗುವುದು.

