ಆರೋಗ್ಯ ಭಾರತಿ ಮಂಗಳೂರು ಜಿಲ್ಲೆ ಮತ್ತು ವೇದಮಾಯು ಆಯುರ್ವೇದ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಇಂದು ದಿನಾಂಕ 18.10.2025 ರಂದು ಧನ್ವಂತರಿ ಜಯಂತಿ ಕಾರ್ಯಕ್ರಮ ಜರಗಿತು. ಆರೋಗ್ಯ ಭಾರತಿಯ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಮುರಳೀ ಮೋಹನ ಚೂಂತಾರು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಮಾಯು ಆಸ್ಪತ್ರೆಯ ಪ್ರಧಾನ ವೈದ್ಯರಾದ ಡಾ. ಕೇಶವ ರಾಜ್ ಅವರು ಧನ್ವಂತರಿ ಜಯಂತಿಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ಆದಿತ್ಯ ಮಾನ್ಯ, ಶ್ರೀಮತಿ ಸಿಂಧು ಹಾಗೂ ಆರೋಗ್ಯ ಭಾರತಿಯ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಚಂದ್ರಗಿರಿ ಉಪಸ್ಥಿತರಿದ್ದರು.
Home Uncategorized ಆರೋಗ್ಯ ಭಾರತಿ ಮಂಗಳೂರು ಜಿಲ್ಲೆ ಮತ್ತು ವೇದಮಾಯು ಆಯುರ್ವೇದ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಧನ್ವಂತರಿ ಜಯಂತಿ