ಪೆರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ (ರಿ.)ನಾರಾವಿ ವಲಯದ ಪೆರಾಡಿ ಕಾರ್ಯಕ್ಷೇತ್ರದ ಹಲೆಕ್ಕಿಬೆಟ್ಟು ಸಂಘದ ಯೋಗೀಶ್ ಇವರ ತಾಯಿಗೆ ಯೋಜನೆಯ ವತಿಯಿಂದ ಕೊಮೊಡೋ ವೀಲ್ ಚೇರ್ ಹಾಗೂ ಜಯ ಪೂಜಾರಿ ಇವರಿಗೆ ವಾಟರ್ ಬೆಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪೆರಾಡಿ ಬಿ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಣ, ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್, ಮೇಲ್ವಿಚಾರಕರಾದ ವಿಶಾಲ ಕೆ, ಪೆರಾಡಿ ಪಂಚಾಯತ್ ಸದಸ್ಯರುಗಳಾದ ಉಮಾವತಿ, ಧನಲಕ್ಷ್ಮಿ, ಸೇವಾಪ್ರತಿನಿಧಿ ನಂದಿನಿ ಉಪಸ್ಥಿತರಿದ್ದರು.