ತೋಕೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಪಾಕಶಾಲೆಯ ಜೀರ್ಣೋದ್ಧಾರಕ್ಕೆ ರೂಪಾಯಿ 1 ಲಕ್ಷದ ಡಿ ಡಿ ಯನ್ನು ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಯೋಜನೆಯ ಯೋಜನಾಧಿಕಾರಿಯಾದ ಗಿರೀಶ್ ಕುಮಾರ್, ಮೂಲ್ಕಿ ಸೀಮೆಯ ಅರಮನೆಯ ಗೌತಮ್ ಜೈನ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ, ಅರ್ಚಕರಾದ ಮದುಸೂಧನ ಭಟ್, ಪುರುಷೋತ್ತಮ ರಾವ್ ವಲಯ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಜನಜಾಗೃತಿ ಅಧ್ಯಕ್ಷರಾದ ವಿನೋದ್ ಸಾಲ್ಯಾನ್ ಮೇಲ್ವಿಚಾರಕರ ನಿಶ್ಮಿತಾ ಶೆಟ್ಟಿ , ಸೇವ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು ವ್ಯವಸ್ಥಾಪನ ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಭಾಸ್ಕರ್ ದೇವಾಡಿಗ ಹಾಗೂ ದಾಮೋದರ ಶೆಟ್ಟಿ ತೋಕೂರು, ಕರುಣಾಕರ ಶೆಟ್ಟಿಗಾರ್, ನಾರಾಯಣ ಸುವರ್ಣ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

