ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನಾರೋಗ್ಯ ಪೀಡಿತರಿಗೆ ನೆರವು

0
60

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ವಿಟ್ಲ ವತಿಯಿಂದ ಪೆರ್ನೆ ವಲಯದ ಪೆರ್ನೆ ಬಿ ಕಾರ್ಯಕ್ಷೇತ್ರದ ಅಯೋಧ್ಯಾನಗರ ನಿವಾಸಿ ಶೇಕ್ ಖಲಂದರ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು , ಇವರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾಗಿರುವ ಕ್ರಿಟಿಕಲ್ ಇಲ್ನೆಸ್ಸೆಸ್ ಫಂಡ್ ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷರಾದ ಯಶೋದಾರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಒಕ್ಕೂಟದ ಅಧ್ಯಕ್ಷರಾದ ಪುಷ್ಕರ ಪೂಜಾರಿ, ವಲಯ ಮೇಲ್ವಿಚಾರಕಿ ಶಾರದಾ, ಸೇವಾಪ್ರತಿನಿಧಿ ಶಶಿಕಲಾ, ಶೌರ್ಯ ಘಟಕದ ಸ್ವಯಂ ಸೇವಕರಾದ ಜಯಶ್ರೀ ಮತ್ತು ಕೃಷ್ಣಪ್ಪ ಮಡಿವಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here