9 ವರ್ಷ ಹಳೆಯ ‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2 ಸಿನಿಮಾ

0
57

ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಕ್ಷರಷಃ ಅಬ್ಬರಿಸುತ್ತಿದೆ. ಬಿಡುಗಡೆ ಆದ ಎಲ್ಲ ಸೆಂಟರ್​​ಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಸಿನಿಮಾಗಳು ದಕ್ಷಿಣದಲ್ಲಿ ಓಡುವುದು ಕಡಿಮೆ, ಅದರಲ್ಲೂ ತಮಿಳುನಾಡು, ಆಂಧ್ರ, ಕೇರಳಗಳಲ್ಲಿ ಬಹಳ ಕಡಿಮೆ. ಆದರೆ ಅಲ್ಲಿಯೂ ಸಹ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ದೇಶದಲ್ಲಿ ಮಾತ್ರವೇ ಅಲ್ಲದೆ, ವಿದೇಶಗಳಲ್ಲಿಯೂ ದೊಡ್ಡ ಮೊತ್ತವನ್ನು ಗಳಿಕೆ ಮಾಡುತ್ತಿದೆ. ಹಳೆಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುತ್ತಿದೆ ‘ಧುರಂಧರ್ 2’ ಸಿನಿಮಾ. ಇದೀಗ ಒಂಬತ್ತು ವರ್ಷ ಹಳೆಯ ‘ಬಾಹುಬಲಿ 2’ ದಾಖಲೆಯೊಂದನ್ನು ಸಿನಿಮಾ ಮುರಿದಿದ್ದು, ‘ಬಾಹುಬಲಿ 2’ ನಿರ್ಮಾಪಕ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ‘ಬಾಹುಬಲಿ 2’ ಸಿನಿಮಾ ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಹಲವು ವರ್ಷಗಳಿಂದಲೂ ಎರಡನೇ ಸ್ಥಾನದಲ್ಲಿದೆ. ಇನ್ನೂ ಈ ದಾಖಲೆಯನ್ನು ‘ಧುರಂಧರ್ 2’ ಸಿನಿಮಾಕ್ಕೆ ಮುರಿಯಲು ಆಗಿಲ್ಲ. ಆದರೆ ಉತ್ತರ ಅಮೆರಿಕದ ಬಾಕ್ಸ್ ಆಫೀಸ್‌ನಲ್ಲಿ ಕಳೆದ 9 ವರ್ಷಗಳಿಂದ ಅಚ್ಚಳಿಯದ ದಾಖಲೆ ಬರೆದಿದ್ದ ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರದ ದಾಖಲೆಯನ್ನು ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2: ದ ರಿವೆಂಜ್’ ಮುರಿದಿದೆ.

ಎಸ್ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಉತ್ತರ ಅಮೆರಿಕದಲ್ಲಿ 20.19 ಮಿಲಿಯನ್ ಡಾಲರ್ (192 ಕೋಟಿ ರೂಪಾಯಿಗಳು) ಗಳಿಸಿ ದಾಖಲೆ ನಿರ್ಮಿಸಿತ್ತು. ಈಗ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಈಗಾಗಲೇ 19.33 ಮಿಲಿಯನ್ ಡಾಲರ್ (183 ಕೋಟಿ ರೂಪಾಯಿಗಳು) ಗಳಿಸಿದ್ದು, ಅತಿ ಶೀಘ್ರದಲ್ಲೇ ಬಾಹುಬಲಿಯ ದಾಖಲೆಯನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ‘ಬಾಹುಬಲಿ 2’ ಸಿನಿಮಾದ ಈ ಕಲೆಕ್ಷನ್ ದಾಖಲೆಯನ್ನು ಕಳೆದ ಒಂಬತ್ತು ವರ್ಷಗಳಿಂದ ಯಾರೂ ಸಹ ಮುರಿದಿರಲಿಲ್ಲ.

2017 ರಲ್ಲಿ ಬಿಡುಗಡೆ ಆಗಿದ್ದ ‘ಬಾಹುಬಲಿ 2’ ಸಿನಿಮಾ ವಿಶ್ವದಾದ್ಯಂತ ಒಟ್ಟು ಸುಮಾರು 1800 ಕೋಟಿಗೂ ಹೆಚ್ಚು ಹಣ ಗಳಿಸಿದೆ. ‘ಧುರಂಧರ್ 2’ ಸಿನಿಮಾ ಈ ದಾಖಲೆಯನ್ನು ಮುರಿಯಲು ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆ ಆಗಿ 11 ದಿನಗಳಾಗಿದ್ದು ಈ ವರೆಗೆ 1200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಸಿನಿಮಾ 1800 ಕೋಟಿ ಗಳಿಸುವ ನಿರೀಕ್ಷೆ ಇದೆ. ‘ಧುರಂಧರ್ 2’ ಸಿನಿಮಾ 1800 ಕೋಟಿ ಗಳಿಸಿದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕದಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಮೊದಲ ಸ್ಥಾನಕ್ಕೇರಲು ‘ದಂಗಲ್’ ಸಿನಿಮಾವನ್ನು ಹಿಂದಿಕ್ಕಬೇಕಿದೆ. ಆ ಸಿನಿಮಾ ವಿಶ್ವದಾದ್ಯಂತ 2200 ಕೋಟಿ ರೂಪಾಯಿ ಗಳಿಕೆ ಮಾಡಿದೆ.

LEAVE A REPLY

Please enter your comment!
Please enter your name here