ಧರ್ಮಸ್ಥಳ ಯೋಜನೆಯ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ)ದಲ್ಲಿ DIGIPAY ಕಾರ್ಯಕ್ರಮಕ್ಕೆ ಚಾಲನೆ

0
37

ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಮಂಗಳೂರು ತಾಲೂಕಿನ ಕದ್ರಿ ವಲಯದ ಯ್ಯಾಯಡಿ ಸಾಮಾನ್ಯ ಸೇವಾ ಕೇಂದ್ರದಲ್ಲಿ DIGIPAY ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Digipay ಕಾರ್ಯಕ್ರಮದಿಂದ ನಾಗರಿಕ ಬಂಧುಗಳಿಗೆ ಆಯ್ದ ಬ್ಯಾಂಕಿಂಗ್ ಸೇವೆಗಳು, AePS ಮತ್ತು mATM ಮೂಲಕ ಬ್ಯಾಂಕ್ ಖಾತೆಯಿಂದ ನಗದೀಕರಣ ಸೌಲಭ್ಯ ಪಡೆದುಕೊಳ್ಳುವಂತೆ ಹಾಗೂ ಸಾಮಾನ್ಯ ಸೇವಾ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುವ ಸೇವೆಗಳು ಮತ್ತು ಸರಕಾರಿ ದರದಲ್ಲಿ ಲಭ್ಯವಿರುವ ಸರ್ವಿಸ್ ಗಳ ಪ್ರಯೋಜನಗಳನ್ನು ಪಡೆದು ಕೊಳ್ಳುವಂತೆ ಪ್ರಶಾಂತ್ ಪೂರ್ಜೆ ಸಿ.ಎಸ್.ಸಿ ತಾಲೂಕು ನೋಡಲ್ ಅಧಿಕಾರಿ ಮಾಹಿತಿ ನೀಡಿದರು.

ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಗೀತಾ ಪ್ರವೀಣ್ ರವರು ಮಾತನಾಡಿ ಧರ್ಮಸ್ಥಳ ಯೋಜನೆಯ ಮೂಲಕ ನೀಡಲಾಗುವ Digipay ಕಾರ್ಯಕ್ರಮಗಳು ಜನರಿಗೆ ಬಹಳ ಉಪಯುಕ್ತ ಸೇವೆ ಆಗಿದೆ. ಬ್ಯಾಂಕಿಂಗ್ ವ್ಯವಹಾರದ ಅರಿವು, ಸಮಯದ ಉಳಿತಾಯ ಹಾಗೂ ಸ್ಥಳೀಯವಾಗಿ ಬ್ಯಾಂಕ್ ಸೌಲಭ್ಯ ಒದಗಿಸುವುದರಿಂದ ಈ ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕದ್ರಿ ವಲಯದ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಸೇವಾದಾರರು, ಸಂಘದ ಸದಸ್ಯರು, ನಾಗರಿಕರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here