ಡಿಜಿಟಲ್ ಪಾವತಿ ಸುರಕ್ಷತೆ : ಹಿರಿಯ ನಾಗರಿಕರಿಗೆ ಜಾಗೃತಿ

0
7

ಮಂಗಳೂರು : ಡಿಜಿಟಲ್ ಪಾವತಿಗಳು ಹಿರಿಯ ನಾಗರಿಕರ ದೈನಂದಿನ ಜೀವನ ಸುಲಭಗೊಳಿಸುವಲ್ಲಿ ನೆರವಾಗಿರುವ ನಡುವೆಯೇ ಮೋಸಗಾರರು ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳನ್ನು ಬಳಸಿಕೊಂಡು ಬಳಕೆದಾರರನ್ನು ಮೋಸಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಅಭಿಯಾನ ಹಮ್ಮಿಕೊಂಡಿದೆ.
ಮೋಸಗಾರರು ಕಾನೂನು ಜಾರಿ ಅಧಿಕಾರಿಗಳಂತೆ ನಟನೆ ಮಾಡಿ ನಕಲಿ ಆರೋಪಗಳ ಹೆಸರಿನಲ್ಲಿ ಬಂಧನದ ಬೆದರಿಕೆ ಹಾಕುತ್ತಾರೆ ಮತ್ತು ಹಣ ಪಾವತಿಸಲು ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಒತ್ತಡ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಹಿರಿಯ ನಾಗರಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಕಟಣೆ ಹೇಳಿದೆ.

ಅಂತೆಯೇ ಹೂಡಿಕೆ ಮೋಸ, ಫಿಶಿಂಗ್ / ವಿಶಿಂಗ್ ಮೋಸಗಳು, ಟೆಕ್ ಸಪೆÇೀರ್ಟ್ ಮೋಸಗಳು,ರಿಫಂಡ್ ಮತ್ತು ಪಾವತಿ ಲಿಂಕ್ ಮೋಸದಂಥ ಜಾಲಗಳಿಂದ ಸ್ವಯಂ ರಕ್ಷಣೆಗೆ ಸರಳ ನಿಯಮಗಳನ್ನು ಪಾಲಿಸುವಂತೆ ಸಲಹೆ ಮಾಡಿದೆ. ಯಾವುದೇ ಕಾರಣಕ್ಕೆ ಯುಪಿಐ, ಪಿಐಎನ್, ಓಟಿಪಿ, ಪಾಸ್‍ವರ್ಡ್, ಬ್ಯಾಂಕ್ ಖಾತೆ ವಿವರಗಳು ಮತ್ತು ಲಾಗಿನ್ ವಿವರಗಳಂಥ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಅಂತೆಯೇ ಅಪರಿಚಿತ ಲಿಂಕ್‍ಗಳು ಅಥವಾ ಅಪ್ಲಿಕೇಶನ್‍ಗಳನ್ನು ಕ್ಲಿಕ್ ಅಥವಾ ಇನ್‍ಸ್ಟಾಲ್ ಮಾಡಬಾರದು, ಹೂಡಿಕೆ ಅತಿಯಾಗಿ ಲಾಭದಾಯಕವೆಂದು ತೋರುತ್ತಿದ್ದರೆ ಜಾಗರೂಕರಾಗಿರುವುದು ಅಗತ್ಯ. ತುರ್ತು ಪರಿಸ್ಥಿತಿಯನ್ನು ಸೃಷ್ಟಸಿದಾಗ ವಿರಾಮ ಕೊಟ್ಟು ಪರಾಮರ್ಶಿಸುವುದು ಅಗತ್ಯ ಎಂದು ಹೇಳಿದೆ.

ಅನಿರೀಕ್ಷಿತ ಕಾನೂನು ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ ಪರಿಶೀಲಿಸುವ ಜತೆಗೆ ಮೋಸವಾಗಿದೆ ಎಂದು ಶಂಕೆ ಇದ್ದರೆ, ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಂ ಹೆಲ್ಪ್‍ಲೈನ್‍ಗೆ 1930 ಡಯಲ್ ಮಾಡಿ ಅಥವಾ ದೂರಸಂಚಾರ ಇಲಾಖೆಯ ವೆಬ್‍ಸೈಟ್ (https://sancharsaathi.gov.in/sfc/) ಮೂಲಕ ವರದಿ ಮಾಡಿ. ನಿಮ್ಮ ಬ್ಯಾಂಕಿಗೆ ಕೂಡ ಪ್ರಕರಣವನ್ನು ವರದಿ ಮಾಡಬೇಕು. ಸಂದೇಶಗಳನ್ನು ಯಾವಾಗಲೂ ಉಳಿಸಿ, ಸ್ಕ್ರೀನ್‍ಶಾಟ್ ತೆಗೆದುಕೊಳ್ಳಿ ಮತ್ತು ಸಂವಾದಗಳನ್ನು ದಾಖಲಿಸಿ. ಅನಪರಿಚಿತ ಕರೆ ಮಾಡುವವರ ಸೂಚನೆಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬ ಸದಸ್ಯರು ಅಥವಾ ವಿಶ್ವಾಸಾರ್ಹ ನೆರೆಹೊರೆಯವರ ಸಹಾಯ ಪಡೆಯಲು ಹಿಂಜರಿಯಬೇಡಿ. ಡಿಜಿಟಲ್ ಪಾವತಿಗಳು ಬಲವಾದ ಮತ್ತು ಸುರಕ್ಷಿತ ವ್ಯವಸ್ಥೆ. ಜಾಗೃತಿ ಮತ್ತು ಶಾಂತ ಪರಿಶೀಲನೆಯೊಂದಿಗೆ, ಹಿರಿಯ ನಾಗರಿಕರು ಪ್ರತಿದಿನವೂ ಅವುಗಳನ್ನು ಆತ್ಮವಿಶ್ವಾಸದಿಂದ ಬಳಸಬಹುದು ಎಂದು ಸಲಹೆ ಮಾಡಿದೆ.

LEAVE A REPLY

Please enter your comment!
Please enter your name here