ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಗ್ರಾಮದ ವಾತ್ಸಲ್ಯ ಸದಸ್ಯರಾದ ಸರಸ್ವತಿಯವರಿಗೆ ಮಾತೃ ಶ್ರೀ ಅಮ್ಮನವರು ನೀಡಿರುವ ದಿನಬಳಕೆ ವಸ್ತುಗಳನ್ನು ಪಂಚಾಯತ್ ಸದಸ್ಯರಾದ ಜಗದೀಶ್ ರವರು ವಿತರಣೆ ಮಾಡಿದರು.
ಈ ಸಂದರ್ಭದ ಮುಳಿಯ ಒಕ್ಕೂಟ ಅಧ್ಯಕ್ಷರಾದ ಉದಯ್ ನಾಯ್ಕ್, ಶೌರ್ಯ ಟೀಮ್ ನವರಾದ ದೀಪಕ್, ಪುಟ್ಟಣ್ಣ, ಕುಶಾಲಪ್ಪ, ವಲಯ ಮೇಲ್ವಿಚಾರಕರಾದ ಮೀನಾಕ್ಷಿ, ಸೇವಾಪ್ರತಿನಿಧಿ ವಿನಯ, ಸರಸ್ವತಿ, ಸಂಘದ ಸದಸ್ಯರಾದ ಡಿಲಾಕ್ಷಿ ಉಪಸ್ಥಿತರಿದ್ದರು.

