ಮುಲ್ಕಿ: ಗೋವಿಗಾಗಿ ಮೇವು ಕಾರ್ಯಕ್ರಮದ ಅಡಿಯಲ್ಲಿ ಮುಲ್ಕಿ ಸಮೀಪದ ಹೆಜಮಾಡಿಯಿಂದ ಪಾವಂಜೆ ಗೋ ಶಾಲೆಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ನೇತೃತ್ವದಲ್ಲಿ ಹಸಿರು ಹುಲ್ಲು ವಿತರಿಸಲಾಯಿತು.
ಈ ಸಂದರ್ಭ ಪ್ರಾಣೇಶ್ ಹೆಜ್ಮಾಡಿ ಮಾತನಾಡಿ, ಗೋವು ದೇವರಿಗೆ ಸಮಾನವಾಗಿದ್ದು, ದೇವರ ಸೇವೆ ಮೂಲಕ ಜೀವನ ಸಾರ್ಥಕ ಅದರಂತೆ ಪ್ರತಿ ವರ್ಷ ಪಾವಂಜೆ ಗೋಶಾಲೆಗೆ ಗೋವುಗಳಿಗೆ ಹಸಿರು ಹುಲ್ಲು ಪೂರೈಕೆ ಮೂಲಕ ಅಳಿಲು ಸೇವೆ ಸಲ್ಲಿಸಿ ಕೃತಾರ್ಥರಾಗಿದ್ದೇವೆ ಎಂದರು.

