ಮುನಿಯಾಲ್ ಮದ್ರಸ ವಿದ್ಯಾರ್ಥಿಗಳಿಗೆ ಕುರಾನ್ ವಿತರಣೆ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಹಾಗೂ ಟೀಮ್ ಮಲೆನಾಡು ಹ್ಯೂಮಿನಿಟರಿಯನ್ ಟ್ರಸ್ಟ್ ಬೆಳ್ವೆ ಇದರ ಜಂಟಿ ಆಶ್ರಯದಲ್ಲಿ ಮುನಿಯಾಲ್ ಬದ್ರಿಯಾ ಜುಮ್ಮ್ ಮಸೀದಿ ಅಲ್ ಖಾದ್ರಿಯ ಮದ್ರಸ ವಿದ್ಯಾರ್ಥಿಗಳಿಗೆ ಪವಿತ್ರ ಗ್ರಂಥ ಕುರಾನ್ ವಿತರಣ ಕಾರ್ಯಕ್ರಮ ಅಲ್ ಖಾದ್ರಿಯ ಮದ್ರಸ ಆವರಣದಲ್ಲಿ ಇತ್ತೀಚೆಗೆ ನಡೆಯಿತು. ನಮ್ಮ ನಾಡ ಒಕ್ಕೂಟ ಇದರ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುನಾವರ್ ಅಜೆಕಾರು. ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಟೀಮ್ ಮಲೆನಾಡು ಹ್ಯೂಮಿನಿಟರಿಯನ್ ಟ್ರಸ್ಟ್ ಬೆಳ್ವೆ ಟ್ರಸ್ಟಿ ನಝೀರ್ ಶಾ , ಬದ್ರಿಯಾ ಜುಮ್ಮಾ ಮಸೀದಿ ಮುನಿಯಾಲ್ ಅಧ್ಯಕ್ಷ ಇಸ್ಮಾಯಿಲ್ ಸಾಧಿಕ್ ಉಪಾಧ್ಯಕ್ಷ ತಾಜುದ್ದೀನ್ , ಕಾರ್ಯದರ್ಶಿ ನಿಜಾಮ್ ,ಸದಸ್ಯ ಅಬ್ದುಲ್ ಅಝೀಝ್ ,ಮುಝಮ್ಮಿಲ್ ಉಪಸ್ತಿರಿದ್ದರು,.ನಮ್ಮ ನಾಡ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಅರಾಫತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಾಸಿಂ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಫರ್ಮನ್ ವಂದಿಸಿದರು.

