ಮೂಡಬಿದಿರೆ: ಲೈನ್ಸ್ ಕ್ಲಬ್ ಅಲಂಗಾರು ಘಟಕದ ಆಶ್ರಯದಲ್ಲಿ, ಲ್ಯಾನ್ಸಿ ಸರಿತ ಡಿಸೋಜ ಬಂಟ್ವಾಳ ಮತ್ತು ಪಿಯುಸ್ ಪರ್ನಾಂಡಿಸ್ ನಾರಾವಿ ಇವರ ನೆರವಿನಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂದಲೆ ಮೈನ್ ಇಲ್ಲಿಯ ವಿದ್ಯಾರ್ಥಿಗಳಿಗೆ ಟಿ-ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಅಮಿತ್ ಡಿಸಿಲ್ವ, ಕಾರ್ಯದರ್ಶಿ ರಿಚರ್ಡ್ ಡಿಸೋಜ , ಕೋಶಾಧಿಕಾರಿಗಳಾದ ರೋಕೀ ಮಸ್ಕರೇನಸ್ ಹಾಗೂ ಸದಸ್ಯರುಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ರಿಚರ್ಡ್ ಡಿಸೋಜ ಅವರು ಮಾತನಾಡಿ ಲಯನ್ಸ್ ಕ್ಲಬ್‌ನ ಇತಿಹಾಸ, ಅಲಂಗಾರು ಘಟಕದ ಸಾಧನೆಗಳು ಮತ್ತು ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ವಿವರಿಸಿದರು.
ಅಮಿತ್ ಡಿಸಿಲ್ವ, ಅಧ್ಯಕ್ಷರು ಲಯನ್ಸ್ ಕ್ಲಬ್ ಅಲಂಗಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪ್ರೇರಣಾತ್ಮಕ ಮಾತುಗಳನ್ನು ಹಂಚಿಕೊಂಡರು. ನಂತರ ಲಯನ್ಸ್ ಕ್ಲಬ್‌ನ ಎಲ್ಲಾ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ವಿದ್ಯಾರ್ಥಿಗಳಿಗೆ ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಗಳನ್ನು ವಿತರಿಸಿದರು.
ಶಾಲೆಯ
ಮುಖ್ಯೋಪಾಧ್ಯಾಯರು ಲೀಡಿಯಾ ಸೆರವೋ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಶರಣಯ್ಯ ಕಾರ್ಯಕ್ರಮ ನಿರೂಪಿಸಿದರು.