ಸಹಕಾರಿ ಕ್ಷೇತ್ರಕ್ಕೆ ತೊಂದರೆ ಎದುರಾದರೆ ಕಾನೂನು ಹೋರಾಟ: ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಎಚ್ಚರಿಕೆ

0
109

ಉಡುಪಿ: ಸಹಕಾರಿ ಕ್ಷೇತ್ರಕ್ಕೆ ತೊಂದರೆ ಎದುರಾದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ಜಿಲ್ಲಾ ಸಹಕಾರ ಯೂನಿಯನ್​ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿಯೇ ಗರಿಷ್ಠ ಮೊತ್ತ 2.68 ಕೋಟಿ ರೂ. ಶಿಕ್ಷಣ ನಿಧಿಯನ್ನು ಮಹಾಮಂಡಳಕ್ಕೆ ನೀಡಲಾಗಿದೆ ಎಂದರು.
ಶಾಸಕ ಯಶ್​ ಪಾಲ್​ ಸುವರ್ಣ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವ ಮೊದಲು ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸುವುದು ಸೂಕ್ತ. ಜನರು ವಿಶ್ವಾಸದ ಮೇಲೆ ಹಣವನ್ನು ಸಹಕಾರಿ ಸಂಗಳಲ್ಲಿ ಠೇವಣಿ ಇಡುತ್ತಾರೆ. ಇದಕ್ಕೆ ಧಕ್ಕೆಯಾಗಬಾರದು. ಇಲಾಖೆಯ ಖಾತೆಯನ್ನು ಸಹಕಾರಿ ಬ್ಯಾಂಕ್​ಗಳಲ್ಲಿ ತೆರೆಯಲು ಅವಕಾಶ ಮಾಡಿಕೊಡಬೇಕು. ಆಗ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಚಿಂತಿಸಬಹುದು ಎಂದರು.
ಸಹಕಾರಿ ಯೂನಿಯನ್​ ಉಪಾಧ್ಯಕ್ಷ ಅಶೋಕ್​ ಕುಮಾರ್​ ಬಲ್ಲಾಳ್​, ನಿರ್ದೇಶಕರಾದ ಗಂಗಾಧರ ಶೆಟ್ಟಿ, ಎ. ಹರೀಶ್​ ಕಿಣಿ, ಶ್ರೀಧರ್​ ಪಿಎಸ್​., ಸುಧೀರ್​ ವೈ, ಅನಿಲ್​ ಎಸ್​ ಪೂಜಾರಿ, ಪ್ರಸಾದ್​ ಎಸ್​. ಶೆಟ್ಟಿ, ಎನ್​. ಮಂಜಯ್ಯ ಶೆಟ್ಟಿ, ಪ್ರದಿಪ ಯಡಿಯಾಳ, ಬಿ. ಅರುಣ್​ ಕುಮಾರ್​ ಹೆಗ್ಡೆ, ಬಿ. ಕರುಣಾಕರ ಶೆಟ್ಟಿ, ಕೆ. ಸುರೇಶ್​ ರಾವ್​ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಫಿಾ ಕೋಟ್ಯಾನ್​ ಸ್ವಾಗತಿಸಿ, ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here