ಮೂಡುಬಿದರೆ ಟೆಂಪಲ್ ಟೌನ್ ರೋಟರಿ ಕ್ಲಬ್ ಗೆ ಜಿಲ್ಲಾ ಗವರ್ನರ್ ಭೇಟಿ

0
17

ವರದಿ ರಾಯಿ ರಾಜ ಕುಮಾರ

ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 31 81ರ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ ಕೆ ಅವರು ಮೂಡಬಿದರೆ ಟೆಂಪಲ್ ಟೌನ್ ರೋಟರಿ ಕ್ಲಬ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಫೆಬ್ರವರಿ 11ರಂದು ಭೇಟಿ ನಿಗದಿಯಾಗಿದ್ದು ಜಿಲ್ಲಾಮಟ್ಟದ ನಾಯಕತ್ವ, ಸ್ಥಳೀಯ ಕ್ಲಬ್ಗಳೊಂದಿಗೆ ಸಂಪರ್ಕವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿರುತ್ತಾರೆ.

ರೋಟರಿ ಟೆಂಪಲ್ ಟೌನ್ ಕ್ಲಬ್ ಹಲವಾರು ಸೇವಾ ಯೋಜನೆಗಳಾದಂತಹ ಆರೋಗ್ಯ, ಶಿಕ್ಷಣ , ಪರಿಸರ ಸಂರಕ್ಷಣೆ, ಯುವ ಸಬಲೀಕರಣ, ಸಮುದಾಯ ಅಭಿವೃದ್ಧಿ ಅಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ನ ಅಧ್ಯಕ್ಷ ಹರೀಶ್ ಎಂ ಕೆ ತಿಳಿಸಿದರು.

ರೋಟರಿ ಟೆಂಪಲ್ ಟೌನ್ ಕ್ಲಬ್ 12 ವರ್ಷಗಳಿಂದ ಬಡ ಕುಟುಂಬಗಳಿಗೆ ಚಿಕಿತ್ಸೆ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸಿದೆ. ಮಕ್ಕಳಿಗೆ ಉಪಯೋಗವಾಗುವ ಶಿಕ್ಷಣ ಸಲಕರಣೆಗಳನ್ನು ನೀಡಿದೆ. ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಿ ಸ್ವಾವಲಂಬನೆಗೆ ಉತ್ತೇಜಿಸಲಾಗಿದೆ. ಸುಮಾರು 24 ಅಂಗನವಾಡಿಗಳ ಸ್ವಚ್ಛತೆಯನ್ನು ಮಾಡುವುದರ ಮೂಲಕವಾಗಿ ಪರಿಸರ ಸಂರಕ್ಷಣೆಗೆ ಪ್ರಯತ್ನಿಸಲಾಗಿದೆ. ಶಿರ್ತಾಡಿಯ ಮಕ್ಕಿ ಶಾಲಾ ವಠಾರದಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ನಡೆಸಿ ಮರಗಳನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ.

ಯುವಕರಿಗೆ ವಿವಿಧ ತರಬೇತಿಗಳನ್ನು ಆಯೋಜಿಸಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಅಗತ್ಯ ಉಳ್ಳವರಿಗೆ ಮನೆ ನಿರ್ಮಾಣ, ಮನೆ ನವೀಕರಣ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ. 15 ಮನೆಗಳಿಗೆ ಸೋಲಾರ್ ವಿದ್ಯುತ್ ದೀಪದ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಈ ರೀತಿ ಸಮಾಜದಲ್ಲಿ ನಂಬಿಕೆ ಮತ್ತು ಗೌರವವನ್ನು ರೋಟೆರಿ ಕ್ಲಬ್ಬಿಗೆ ಹೆಚ್ಚಿಸಲು ಸದಾ ಪ್ರಯತ್ನವನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರು, ಕಾರ್ಯದರ್ಶಿಗಳಾದ ಭರತ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಪೂರ್ಣಚಂದ್ರ ಜೈನ್, ನಿಯೋಜಿತ ಅಧ್ಯಕ್ಷ ಡೆನ್ನಿಸ್ ಪಿರೇರಾ, ಹಾಜರಿದ್ದರು.

LEAVE A REPLY

Please enter your comment!
Please enter your name here