ನವಂಬರ್ ಒಂದರಂದು ಕೇರಳ ಪಿರವಿ,ಭಾಷಾದಿನವಾಗಿ ಆಚರಿಸುತ್ತಿರುವ ಕೇರಳ ರಾಜ್ಯೋತ್ಸವದಂದು ಕಾಸರಗೋಡುನ ಜಿಲ್ಲಾಧಿಕಾರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದ ಮಹಿಳೆಯರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಲಿಯಾಳ ಭಾಷೆಯ ಸಾಹಿತಿ ಶ್ರೀಮತಿ ಸೀತಾದೇವಿ ಕರಿಯಾಟು ಮತ್ತು ತುಲು ಮತ್ತು ಕನ್ನಡ ಸಾಹಿತಿ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್, ಜಿಲ್ಲಾಧಿಕಾರಿ ಇಂಪಶೇಖರ್ ಐ ಎಂ ಎಸ್, ಶ್ರೀಮತಿ ಪಿ.ಬೇಬಿ ಬಾಲಕೃಷ್ಣನ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ,ಶ್ರೀ ರಮೀಜ್ ರಾಜಾ.ಕೆ.ಎ.ಎಸ್, ಶ್ರೀಮತಿ ಶುಭಾ ಒಬ್ಬ.ಸಂಸ್ಕೃತಿಕ ಕಾರ್ಯಕರ್ತೆ, ಚಲನಚಿತ್ರ ನಟಿ, ಹಾಗೂ ಇನ್ನಿತರ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.
ಮಲಿಯಾಳ ಸಾಹಿತಿ ರವೀಂದ್ರನ್ ಪಾಡಿ ಮತ್ತು ಶ್ರೀಮತಿ ಎಂ.ಪಿ.ದಿಲ್ನಾ ಪರಿಚಯಿಸಿದರು ,ಶ್ರೀಯುತ ಮಧುಸೂದನನ್ ಜಿಲ್ಲಾ ಮಾಹಿತಿ ಅಧಿಕಾರಿ ಸ್ವಾಗತಿಸಿ ಶ್ರೀಮತಿ ಎಸ್.ಚಿಲಂಗಾ.ಎ.ಐ.ಒ ವಂದಾನಾರ್ಪಣೆ ಗೈದರು.

