ಜಿಲ್ಲೆಯ ಹೆಸರು ಬದಲಾವಣೆ ವಿಚಾರ: ತುಳು ಭಾಷೆಗೂ ಇರಲಿ ಒಂದು ದಿನ ಎಂದ ರಕ್ಷಿತ್‌ ಶಿವರಾಮ್‌

0
55

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡವನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾಯಿಸಿ ಮರುನಾಮಕರಣ ಮಾಡುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದ್ದಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿಯ ರಕ್ಷಿತ್‌ ಶಿವರಾಮ್‌ ಕೂಡಾ ಪ್ರತಿಕ್ರಿಯೆ ನೀಡಿದ್ದು, ತುಳುವಿಗಾಗಿ ಒಂದು ದಿನ ಗೊತ್ತು ಪಡಿಸಿ ತುಳು ಭಾಷೆಗಾಗಿ ಕೆಲಸ ಆಗಬೇಕಿದೆ ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾಯಿಸಲು ಜಾತಿ, ಧರ್ಮ, ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿರುವುದು ಸಂತಸದ ಸಂಗತಿ. ಸಂಸದರು ಈ ಬಗ್ಗೆ ಯಾವಾಗಲೂ ವಿಚಾರ ಪ್ರಸ್ತಾಪ ಮಾಡುತ್ತಿದ್ದರು. ದಕ್ಷಿಣ ಕನ್ನಡ ನಮಗೆ ಯಾವುದೇ ರೀತಿಯಲ್ಲೂ ಹೊಂದಾಣೆಕೆ ಆಗದ ಹೆಸರು. ಆದಷ್ಟು ಶೀಘ್ರವಾಗಿ ಮರುನಾಮಕರಣವಾಗಲಿ ಎಂದಿದ್ದಾರೆ.

LEAVE A REPLY

Please enter your comment!
Please enter your name here