ವರದಿ ರಾಯಿ ರಾಜ ಕುಮಾರ
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ. ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಹಾಗೂ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರ ದೈವಜ್ಞ ದರ್ಶನ ಕಾರ್ಯಕ್ರಮ ದಿನಾಂಕ 07- 01 -2026 ನೇ _ಬುಧವಾರ ಸಾಯಂಕಾಲ 6.00 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪ, ಅಶೋಕನಗರ, ಮಂಗಳೂರು, ಇಲ್ಲಿ ನೆರವೇರಲಿದೆ.
ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ ಸ್ಥಾಪಿಸಲಾದ ದೈವಜ್ಞ ಶ್ರೀ ಮಠವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯಗಳನ್ನು ಪೂರೈಸುತ್ತಾ ಮುಂದುವರೆಯುತ್ತಿದ್ದು, ಇದೀಗ ದೇವರನ್ನು ತಿಳಿದು ದೈವಯಜ್ಞ ಮುಂತಾದವುಗಳನ್ನು ಆಚರಿಸುತ್ತಾ ದೈವಜ್ಞರೆಂದು ಖ್ಯಾತರಾದ ಸಮಾಜ ಬಾಂಧವರನ್ನು ಸಂದರ್ಶಿಸಲು “ದೈವಜ್ಞ ದರ್ಶನ” ಎಂಬ ಕಾರ್ಯ ನಿಮಿತ್ತ ಮಂಗಳೂರಿಗೆ ಚಿತ್ತೈಸಲಿರುವರು.

