ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ್ ಪೂಜಾರಿ ನಿಧನ

0
58

ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ (60) ಫೆಬ್ರವರಿ 15 ರಂದು ನಿಧನ ಹೊಂದಿದರು. ಮೃತರು ಪತ್ನಿ,ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಾಸರಗೋಡಿನಲ್ಲಿ‌ದೈವ ದರ್ಶನಕ್ಕೆಂದು ತೆರಳಿದ್ದ ಸಂದರ್ಭ ಹೃದಯಾಘಾತಕ್ಕೊಳಗಾದ ದಿವಾಕರ ಪೂಜಾರಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗದೆ ಮೃತಪಟ್ಟರು. ಮುಂಡ್ಕೂರಿನ ಜಾರಿಗೆಕಟ್ಟೆಯಲ್ಲಿ ಕೊರಗಜ್ಜ,ಕೊರಗರ ಪಂಜುರ್ಲಿ ಸಹಿತ ವಿವಿಧ ಪರಿವಾರ ಶಕ್ತಿಗಳ ಕೇಂದ್ರಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದು , ಕ್ಷೇತ್ರದಲ್ಲಿ ನಿರಂತರ ಕೋಲ,ಅಗೇಲು ಸೇವೆಗಳು ನಡೆಯುತ್ತಿದ್ದವು.

ಕ್ಷೇತ್ರದಲ್ಲಿ‌ ಕ್ರೈಸ್ತ,ಮುಸ್ಲಿಂ ಸಮಾಜದ ಬಂಧುಗಳೂ ಹರಕೆಯ ಕೋಲ‌ ಹಾಗೂ ಅಗೇಲು ಸೇವೆ ನೀಡುತ್ತಿದ್ದು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರ ಕಾರಣಿಕ ಕ್ಷೇತ್ರವೆನಿಸಿತ್ತು. ಮೃತರು ಮುಂಡ್ಕೂರು ಪೊಸ್ರಾಲು ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿದ್ದು ಇತ್ತೀಚೆಗೆ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

LEAVE A REPLY

Please enter your comment!
Please enter your name here