ವಿಜೇತ ವಿಶೇಷ ಶಾಲಾ ದೇವರ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಲು ವಿಶೇಷ ಆಹ್ವಾನಿತರಾಗಿ ತಹಶೀಲ್ದಾರ್ & ಕಾರ್ಯ ನಿರ್ವಾಹಕ ದಂಡಾಧಿಕಾರಿಗಳಾದ ಮಾನ್ಯ ಪ್ರದೀಪ್ ಆರ್ ಕೆ.ಎ.ಎಸ್ ಇವರು ಆಗಮಿಸಿ ದೀಪಾವಳಿ ಹಬ್ಬದ ದೀಪಗಳನ್ನು ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಇಸ್ರೋ ವಿಜ್ಞಾನಿ & ಸಮಾಜ ಸೇವಕರಾದ ರೊ.ಇಡ್ಯಾ ಜನಾರ್ಧನ ರಾವ್ ಉಪಸ್ಥಿತರಿದ್ದು ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ರೊ. ಸುರೇಶ್ ನಾಯಕ್ ಕಾರ್ಕಳ, ಉಪಸ್ಥಿತರಿದ್ದು ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು.
ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ರಿ. ಅಧ್ಯಕ್ಷರಾದ ಅವಿನಾಶ್ ಶೆಟ್ಟಿ ,ದೀಪಾವಳಿ ಸಂಭ್ರಮಕ್ಕೆ ಮಕ್ಕಳಿಗೆ ನಕ್ಷತ್ರ ಕಡ್ಡಿಗಳನ್ನು ವಿತರಿಸಿದರು.
ಶಾಲಾ ಹಿತೈಷಿಗಳು ಶ್ರೀ ಅಪ್ಪು ರಾಯ ಕಿಣಿ, ಶ್ರೀ ವಿಶ್ವನಾಥ್ ನಿವೃತ್ತ ಪ್ರಾಧ್ಯಾಪಕರು, ಶ್ರೀ ದುರ್ಗ ವಿದ್ಯಾ ಸಂಘ ಟ್ರಸ್ಟ್ ರಿ. ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.
ದೀಪಾವಳಿ ಹಬ್ಬದ ಪ್ರಯುಕ್ತ ಶಾಲಾ 36 ಸಿಬ್ಬಂದಿ ವರ್ಗದವರಿಗೆ ಉಡುಗೊರೆ ವಿತರಿಸಲಾಯಿತು.
ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಕಾಂತಿ ಹರೀಶ್ ಸ್ವಾಗತಿಸಿ ವಿಶೇಷ ಶಿಕ್ಷಕಿ ಶ್ರೀನಿಧಿ ಅಶೋಕ್ ವಂದಿಸಿದರು.
ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಹರೀಶ್, ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಮುಗ್ಧ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.

