ಕುರ್ಚಿ ಮೇಲೆ ಕುಳಿತು ನಿದ್ರೆಗೆ ಜಾರಿದ ವೈದ್ಯ..! ತೀವ್ರ ರಕ್ತಸ್ರಾವದಿಂದ ರೋಗಿ ಸಾವು ಆರೋಪ

0
36

ಮೀರತ್​: ವೈದ್ಯೋ ನಾರಾಯಣೋ ಹರಿಃ ಅಂತಾರೆ, ದೇವರಂತೆ ಕಾಪಾಡಬೇಕಿದ್ದ ವೈದ್ಯರೇ ರೋಗಿ ಸಾವಿಗೆ ಕಾರಣರಾಗಿದ್ದಾರೆ. ವೈದ್ಯರೊಬ್ಬರ ಬೇಜವಾಬ್ದಾರಿತನದಿಂದ ರೋಗಿ ಪ್ರಾಣ ಬಿಟ್ಟಿರುವ ಘಟನೆ ಮೀರತ್​​ನಲ್ಲಿ ನಡೆದಿದೆ. ಮೀರತ್‌ನ ಎಲ್‌ಎಲ್‌ಆರ್‌ಎಂ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ರೋಗಿಯ ಸಾವಾಗಿದೆ. ವೈದ್ಯರೊಬ್ಬರು ಕುರ್ಚಿಯ ಮೇಲೆ ಮಲಗಿ ನಿದ್ರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸ್ಟ್ರೆಚರ್ ಮೇಲೆ ಮಲಗಿದ್ದಾರೆ. ತುಂಬಾ ರಕ್ತಸ್ರಾವವಾಗುತ್ತಿತ್ತು. ಆದರೆ ವೈದ್ಯರಿಗೆ ಎಚ್ಚರವೇ ಇರಲಿಲ್ಲ. ಗಾಯಾಳು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ ಎಂದು ರೋಗಿಯ ಕುಟುಂಬದವರು ಆರೋಪ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here