ಜೆಸಿಐ ಕುಂದಾಪುರ ಘಟಕದ ವತಿಯಿಂದ ದಿನಾಂಕ 01.07.2025 ರಂದು ವೈದ್ಯರ ದಿನಾಚರಣೆಯ ಅಂಗವಾಗಿ ಪಶು ವೈದ್ಯರಾದ ಡಾ.ಗಣೇಶ ಐತಾಳ್ ಉಪ್ಪಿನಕುದ್ರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರದ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ ಜೆಸಿಐ ಕುಂದಾಪುರದ ಪೂರ್ವದ್ಯಕ್ಷರಾದ ಜೆಸಿ ರತ್ನಾಕರ್ ಜೆಜೆಸಿ ಅಧ್ಯಕ್ಷರಾದ ರಥ್ವಿಕ್, ಜೆಸಿ ಚೇತನ್ ದೇವಾಡಿಗ ಜೆಸಿ ರಾಕೇಶ್ ಶೆಟ್ಟಿ ಜೆಸಿ ಪುಷ್ಪಲತಾ ಇವರು ಪಾಲ್ಗೊಂಡಿದ್ದರು ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಇವರು ಅಧ್ಯಕ್ಷತೆ ವಹಿಸಿ ಸ್ವಾಗತ ಕೋರಿದರು. ಜೆಸಿ ಪ್ರವೀಣ್ ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು.