ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ನವರಾತ್ರಿ, ದುರ್ಗಾ ನಮಸ್ಕಾರ ಪೂಜೆ

0
164

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನೆರವೇರುತ್ತಿರುವ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ, ವೇ|ಮೂ| ವಿಖ್ಯಾತ್ ಭಟ್ ಅವರ ನೇತೃತ್ವದಲ್ಲಿ ಸಹಸ್ರನಾಮಾರ್ಚನೆ, ಕಲ್ಪೋಕ್ತ ಪೂಜೆ, ಶ್ರೀರಂಗಪೂಜೆ, ದೀಪಾರಾಧನೆ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರುತ್ತಿದೆ.

ಕ್ಷೇತ್ರದಲ್ಲಿ ನವರಾತ್ರಿಯ 5ನೇ ದಿನ ಭಕ್ತರಾದ ಮಣಿಕಂಠ ಮತ್ತು ಮನೆಯವರು ಹಾಗೂ ವಿನಯ ಶೆಟ್ಟಿ ಮತ್ತು ಮನೆಯವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ನೆರವೇರಿತು. ಕುಸುಮಾ ನಾಗರಾಜ್ ಮತ್ತು ಮನೆಯವರು ಹಾಗೂ ಪದ್ಮಿನಿ ರಾಜೇಶ್ ಮತ್ತು ಮನೆಯವರಿಂದ ಜೋಡಿ ದುರ್ಗಾ ನಮಸ್ಕಾರ ನಡೆಯಿತು. ಮಧ್ಯಾಹ್ನದ ಮಹಾಪೂಜೆಯ ಅನಂತರ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ನೃತ್ಯ ಸೇವೆಯನ್ನು ಮೇಘಾ ಮತ್ತು ತಂಡ, ಸೃಷ್ಟಿ ಅರುಣ್, ಸಾಯಂತಿಕಾ, ಪ್ರಕೃತಿ ಸಮರ್ಪಿಸಿದರು. ನವಶಕ್ತಿ ಭಜನ ಮಂಡಳಿ, ಆಂಜನೇಯ ಭಜನ ಮಂಡಳಿಯಿಂದ ಭಜನೆ ಸಂಕೀರ್ತನೆ, ನವಶಕ್ತಿ ವೇದಿಕೆಯಲ್ಲಿ ಮಯೂರ ನೃತ್ಯ ತಂಡದವರಿಂದ ನೃತ್ಯ ವೈವಿಧ್ಯ ಜರಗಿತು. ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಸ್ಕಂದ ಮಾತೆಯಾಗಿ ಅಲಂಕರಿಸಿದ್ದರು. ಅರ್ಚಕ ಅನೀಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here