ರಷ್ಯಾ & ಉಕ್ರೇನ್ ಯುದ್ಧ ಒಂದು ರೀತಿ ಬಿಡಿಸಲು ಆಗದ ಕಗ್ಗಂಟಾಗಿ ಪರಿಣಮಿಸಿದ್ದು, ಇದೇ ರೀತಿ ಇಬ್ಬರ ನಡುವೆ ಯುದ್ಧ ಮುಂದುವರಿದರೆ ಮತ್ತೆ ಬೇರೆ ಬೇರೆ ದೇಶಗಳ ನಡುವೆ ಕೂಡ ವಾರ್ ಶುರುವಾಗಿ ಪರಿಸ್ಥಿತಿ ಕೈಮೀರುವ ಆತಂಕ ಕಾಡುತ್ತಿದೆ. ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ಶುರುವಾದ ನಂತರದಲ್ಲಿ ಶಾಂತವಾಗಿದ್ದ ಜಗತ್ತು ಅಶಾಂತ ವಾತಾವರಣಕ್ಕೆ ತಿರುಗಿದೆ. ಅದರಲ್ಲೂ ಇಡೀ ಪ್ರಪಂಚ ಈಗ ಗುಂಪು, ಗುಂಪಾಗಿ ಒಡೆದು ಹೋಗುತ್ತಿದೆ. ಈ ಕಾರಣಕ್ಕೆ ರಷ್ಯಾ ಜೊತೆ ಮಹತ್ವದ ಮಾತುಕತೆಗೆ ಅಮೆರಿಕ ಅಧ್ಯಕ್ಷರೇ ಸಿದ್ಧರಾಗಿದ್ದಾರಾ?
ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ ಅತ್ಯುತ್ತಮ ಸ್ನೇಹಿತರು. ನಮ್ಮ ನಡುವೆ ಸ್ನೇಹ ಇದೆ ಅಂತಾ ಟ್ರಂಪ್ ಕೂಡ ಹಲವು ಬಾರಿ ಹೇಳಿದ್ದು ಕೂಡ ಉಂಟು. ಇಷ್ಟೆಲ್ಲಾ ಫ್ರೆಂಡ್ಶಿಪ್ ಇದ್ದರೂ ಶಾಂತಿ ಮಾತ್ರ ಸೃಷ್ಟಿಯಾಗಿಲ್ಲ, ಬದಲಾಗಿ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಘೋರವಾಗುತ್ತಿದೆ. ಹೀಗಿದ್ದಾಗ ಅಮೆರಿಕದ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿ ಸಭೆಗಳ ಮೇಲೆ ಸಭೆ ನಡೆಸಿದರೂ ಪರಿಸ್ಥಿತಿ ಸರಿಯಾಗೇ ಇಲ್ಲ. ಇದೆಲ್ಲವನ್ನೂ ಗಮನಿಸಿ ಇದೀಗ ಡೊನಾಲ್ಡ್ ಟ್ರಂಪ್ ನೇರವಾಗಿ ಎಂಟ್ರಿ ಕೊಡುತ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
ದಕ್ಕಿಂತ ಹೆಚ್ಚಾಗಿ ರಷ್ಯಾ & ಅಮೆರಿಕ ಪಕ್ಕಾ ಶತ್ರು ದೇಶಗಳೇ ಆಗಿದ್ದರೂ, ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಗಿದೆ. ಎರಡೂ ದೇಶಗಳ ನಡುವೆ ಮಾತುಕತೆ ಕೂಡ ಚನ್ನಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ, ರಷ್ಯಾ ದಾಳಿ ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಡೈರೆಕ್ಟ್ ಎಂಟ್ರಿ? ಎಂಬ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು… ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆದಷ್ಟು ಬೇಗ ರಷ್ಯಾ & ಉಕ್ರೇನ್ ವಾರ್ ನಿಲ್ಲಬೇಕು ಎಂಬ ಡಿಮ್ಯಾಂಡ್ ಕೇಳಿ ಬರುತ್ತಿದೆ. ಯಾಕಂದ್ರೆ ಈ ಎರಡೂ ದೇಶಗಳು ಇದೇ ರೀತಿಯಾಗಿ ಫೈಟಿಂಗ್ ಮಾಡುತ್ತಿದ್ದರೆ ಮುಂದೆ ಮತ್ತಷ್ಟು ಕಂಟಕ ಎದುರಾಗುವ ಅಪಾಯ ಇದೆ. ಹೀಗಾಗಿಯೇ ಆದಷ್ಟು ಬೇಗ ಈ ಯುದ್ಧ ನಿಲ್ಲಿಸಬೇಕು, ಹಾಗೇ ಮತ್ತಷ್ಟು ಯುದ್ಧಗಳು ಶುರುವಾಗುವ ಅಪಾಯ ತಪ್ಪಿಸಬೇಕು ಎಂಬ ಆಗ್ರಹ ಕೂಡ ಕೇಳಿ ಬಂದಿದೆ.