ಬೆಳ್ತಂಗಡಿ : ಕನ್ಯಾಡಿಯ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸದಸ್ಯರು ಕನ್ಯಾಡಿ ಸೇವಾನಿಕೇತನಕ್ಕೆ ಆಗಸ್ಟ್ 08 ರಂದು ಭೇಟಿ ನೀಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂ. 25,000 ಮೊತ್ತದ ಚೆಕ್ ನೀಡಿ, ಕಟ್ಟಡದ ನಿರ್ಮಾಣ ಶೀಘ್ರವಾಗಿ ನೆರವೇರುವಂತೆ ಶುಭಹಾರೈಸಿದರು. ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕರಾವ್ ರವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಕನ್ಯಾಡಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಪಿ, ಕಾರ್ಯದರ್ಶಿ ಶ್ರೀ ಗಣೇಶ್ ಬಜಿಲ, ಉಪಾಧ್ಯಕ್ಷರಾದ ಅರುಣ್ ನಾಯ್ಕ್, ಸಂಯೋಜಕರಾದ ರಾಘವ ಕುರ್ಮಾಣಿ, ಸಹಕಾರ್ಯದರ್ಶಿ ವಿದ್ಯಾಧರ್ ರೈ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಚೇತನ್ ಗುಡಿಗಾರ್, ಉಪಾಧ್ಯಕ್ಷರಾದ ಗೋವಿಂದ ಸುವರ್ಣ ಪೊಂಗರು, ಸದಸ್ಯರಾದ ಮಹಾಬಲ ನಾಯ್ಕ ಮತ್ತು ಉಮೇಶ ಆಚಾರ್ಯ ಉಪಸ್ಥಿತರಿದ್ದರು.