ಪಡುಮಾರ್ನಾಡಿನ ಸುಮುಖ ಮಂದಿರ, ಸಭಾಭವನಕ್ಕೆ ಧರ್ಮಸ್ಥಳ ಯೋಜನೆಯಿಂದ ದೇಣಿಗೆ

0
18

ಪಡುಮಾರ್ನಾಡು ಅಚ್ಚರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುಮುಖ ಮಂದಿರ ಹಾಗೂ ಸಭಾಭವನದ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1 ಲಕ್ಷ ರೂ. ದೇಣಿಗೆಯನ್ ಹಸ್ತಾಂತರಿಸಲಾಯಿತು.

ತಾಲೂಕು ಯೋಜನಾಧಿಕಾರಿ ಧನಂಜಯ್ ಅವರು ದೇಣಿಗೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ.ದಯಾನಂದ ಪೈ ಅವರಿಗೆ ಹಸ್ತಾಂತರಿಸಿದರು.

ದೇಣಿಗೆ ಸ್ವೀಕರಿಸಿ ಮಾತನಾಡಿ ಗಣೇಶೋತ್ಸವ ಸಮಿತಿ ಮಾತ್ರವಲ್ಲದೆ ಊರಿನ ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳಿಗೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಯೋಜನೆಯ ಮುಖೇನ ದೇಣಿಗೆ, ಸವಲತ್ತುಗಳು ಲಭಿಸಿವೆ. ಸಮಿತಿಯಿಂದ ಈಗಾಗಲೇ ಸುಸಜ್ಜಿತವಾದ ಸಭಾಭವನ ಹಾಗೂ ಮಂದಿರ ನಿರ್ಮಾಣಗೊಂಡಿದೆ. ಮುಂದೆ ಭೋಜನಾಲಯ, ಅಡುಗೆ ಕೋಣೆಯ ಯೋಜನೆಯನ್ನು ರೂಪಿಸಿದ್ದೇವೆ ಎಂದರು.

ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಬೆಳುವಾಯಿ ವಲಯಾಧ್ಯಕ್ಷ ಜಗತ್ಪಾಲ್ ಎಸ್.ಹೆಗ್ಡೆ, ಯೋಜನೆಯ ಮೇಲ್ವಿಚಾರಕಿ ಯಶೋಧ, ಒಕ್ಕೂಟದ ಅಧ್ಯಕ್ಷ ಶ್ಯಾಮ್ ಹೆಗ್ಡೆ, ಸೇವಾ ಪ್ರತಿನಿಧಿ ಉಷಾಕಿರಣ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಉದಯ ಪೂಜಾರಿ, ಸಂಚಾಲಕ ದಯಾನಂದ ಭಟ್, ಕೋಶಾಧಿಕಾರಿ ಜಯರಾಂ, ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here