ಮೂಡುಬಿದಿರೆ: ಆರದಿರಲಿ ಬದುಕು ಆರಾಧನ ತಂಡದ 103 ನೇ ಯೋಜನೆ ಅಕ್ಟೋಬರ್ ತಿಂಗಳ ಸಹಾಯ ಹಸ್ತವನ್ನು ಪುತ್ತೂರು ತಾಲೂಕಿನ ಮುರ ಗ್ರಾಮದ ಸೂರಜ್ ನಾಯ್ಕ್ ಅವರ ಪತ್ನಿ ಶ್ರೀಮತಿ ದೀಕ್ಷಿತ ನಾಯ್ಕ್ ಅವರು ನರ ಸಂಬಂದಿತ ಗಂಬೀರ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 2 ಮಕ್ಕಳಿದ್ದು ಕಡುಬಡವರಾದ ಇವರ ಕಷ್ಟ ಅರಿತ ನಮ್ಮ ತಂಡ ಕಟೀಲು ದೇವಸ್ಥಾನದಲ್ಲಿ ಅವರ ಪತಿ ಸೂರಜ್ ನಾಯ್ಕ್ ಅವರಿಗೆ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸದಸ್ಯರಾದ ಭಾಸ್ಕರ ದೇವಾಡಿಗ ಅಭಿಷೇಕ್ ಶೆಟ್ಟಿ ಐಕಳ ದೀನ್ ರಾಜ್ ಬಸವರಾಜ ಮಂತ್ರಿ, ಗಣೇಶ್ ಪೈ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ , ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನಗಿರಿ, ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ಬೀಮಯ್ಯ ಸುಳ್ಯ, ಅಗರಿ ರಾಘವೇಂದ್ರ ರಾವ್, ಭಾಸ್ಕರ ದೇವಸ್ಯ ದಿನೇಶ್ ಸಿದ್ದಕಟ್ಟೆ, ನಾಗರಾಜ ಸಾಲ್ಯನ್, ಶಾರದಾ ಅಂಚನ್, ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತರಿದ್ದರು.

