ಸಿವಿಲ್‌ ಡಿಫೆನ್ಸ್‌ ಚೀಫ್‌ ವಾರ್ಡನ್‌ ಆಗಿ ಡಾ. ಚೂಂತಾರು ನೇಮಕ

0
99

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್‌ ಡಿಫೆನ್ಸ್‌ (ಪೌರ ರಕ್ಷಣೆ)ವಿಭಾಗದ ಚೀಫ್‌ ವಾರ್ಡನ್ ಆಗಿ ಡಾ. ಮುರಲೀ ಮೋಹನ್ ಚೂಂತಾರು ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಹೋಂ ಗಾರ್ಡ್ಸ್, ನಾಗರಿಕ ರಕ್ಷಣಾ ವಿಭಾಗದ ಕಮಾಂಡೆಂಟ್ ಜನರಲ್ ಅವರು ಫೆ.2ರಂದು ಈ ಆದೇಶ ಹೊರಡಿಸಿದ್ದಾರೆ. ನಾಗರಿಕ ರಕ್ಷಣಾ ಕಾಯಿದೆ 1968ರ ಕಲಂ 5(1)ರ ಅನ್ವಯ ತಕ್ಷಣದಿಂದ ಅನ್ವಯಿಸಿ ಒಂದು ವರ್ಷದ ಅವಧಿಗೆ ಈ ನೇಮಕಾತಿ ಜಾರಿಯಲ್ಲಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಡಾ. ಮುರಲೀ ಮೋಹನ್ ಚೂಂತಾರು ಅವರು ದಂತ ವೈದ್ಯರಾಗಿದ್ದು, ಜಿಲ್ಲಾ ಹೋಮ್ ಗಾರ್ಡ್ಸ್‌ ಕಮಾಂಡೆಂಟ್‌ ಆಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here