ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ಕೆ. ವಾಮನ್ ರಾವ್ ಬೇಕಲ ಎಂಬ ಪುಸ್ತಕ,… ಡಾ. ನಾ. ಮೊಗಸಾಲೆ ಸಾರತ್ಯದ ಕನ್ನಡ ಸಂಘ ಕಾಂತಾವರ “ನಾಡಿಗೆ ನಮಸ್ಕಾರ ಪುಸ್ತಕ ಮಾಲೆಯಲ್ಲಿ ಪ್ರಕಟಗೋಳಿಸಿದೆ. ನವೆಂಬರ್ ಒಂದರಂದು, ಕನ್ನಡ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘ ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನಃರೂರು ಅದ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ಗೊಂಡಿತ್ತು.
ಕಾಸರಗೋಡು ಕನ್ನಡ ಭವನಕ್ಕೆ ದಿನಾಂಕ 3.11.2025 ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷರು, ಹಾಗೂ ಮುಂಬರುವ ಕ. ಸಾ. ಪ. ರಾಜ್ಯಾಧ್ಯಕ್ಷ ಸ್ಥಾನ, ಸೇವಾ ಆಕಾಂಕ್ಷಿ ಯೂ ಅದ ಡಾ. ಸಿ. ಸೋಮಶೇಖರ್ ಐ ಎ. ಎಸ್. ಅವರು ವಾಮನ್ ರಾವ್ ಬೇಕಲ್ ಇವರ ಈ ಪುಸ್ತಕ ಲೋಕಾರ್ಪಣೆ ಮಾಡಿದರು. ಕನ್ನಡ ಭವನದ ನಿಸ್ವಾರ್ಥ ಹಾಗೂ ನಿರಂತರ ಕನ್ನಡ ಕಾಯಕವನ್ನು. ಮೆಚ್ಚಿ ಕೊಂಡಾಡಿದ ಡಾ. ಸಿ. ಎಸ್. ಸೋಮಶೇಖರ್ ಕನ್ನಡ ಭವನವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುತ್ತಿರುವ ಕನ್ನಡ ಭವನ ಘಟಕ ಗಳ ಕೆಲಸ, ಮೆಚ್ಚುವಂತಹದು ಹಾಗೂ ಇತರ ಸಂಸ್ಥೆ ಗಳಿಗೆ ಅನುಕರಣೀಯ ಎಂದರು. ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್ ಸುಬ್ಬಯ್ಯ ಕಟ್ಟೆ, ಪತ್ರ ಕರ್ತರ ಸಂಘ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಮ್,, ಸೋಮಶೇಖರ್ ಗಾಂಜಿ,, ಡಾ. ಕೆ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಮುಂತಾದವರಿದ್ದರು. ಸಂದ್ಯಾ ರಾಣಿ ಸ್ವಾಗರಿಸಿ, ವಾಮನ್ ರಾವ್ ಬೇಕಲ್ ವಂದಿಸಿದರು

