ಡಾ. ಮಂದಾರ ರಾಜೇಶ್ ಭಟ್ಟರಿಗೆ ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ “ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ -2025”

0
117

ಪರ್ಯಾಯ ಪುತ್ತಿಗೆ ಮಠದ ಗೀತಾ ಮಂದಿರದಲ್ಲಿ ವಿಕಾಸ ಬೆಂಗಳೂರು “ಕರಾವಳಿ ಸಂಭ್ರಮ – 2025 “

ವರದಿ ÷ ಪುನೀತ್, ಸಂಪಾದಕರು ತುಳುನಾಡು ವಾರ್ತೆ

ತುಳುನಾಡು: ಹಿರಿಯ ಪತ್ರಕರ್ತರ ಸ್ಮರಣಾರ್ಥ ನೀಡುವ `ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ’ಗೆ ತುಳುನಾಡು ವಾರ್ತೆ ಉಪಸಂಪಾದಕ ಡಾ. ಮಂದಾರ ರಾಜೇಶ್ ಭಟ್ ಸಹಿತ ೧೦ಮಂದಿ ಸಾಧಕರು ಭಾಜನರಾಗಿದ್ದಾರೆ.

ಪುತ್ತಿಗೆ ಮಠದ ಅಂತಾರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ವಿಕಾಸ ಅಧ್ಯಕ್ಷರಾದ ಶ್ರೀನಾಥ್ ಜೋಶಿ, ಬನ್ನಂಜೆ ಗೋವಿಂದ ಆಚಾರ್ಯರ ಮಗಳು ವೀಣಾ ಬನ್ನಂಜೆ, ಕ್ಯಾಪ್ಟನ್ ಗಣೇಶ್ ಕಾರ್ನಿಕ್, ವಿಕಾಸದ ಕಾರ್ಯದರ್ಶಿ ಹನುಮೇಶ್ ಯಾವಗಲ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ಕುಂಟಾಡಿ ದಯಾನಂದ ಪೈ, ಗುರುರಾಜ ಪೋಶೆಟ್ಟಿಹಳ್ಳಿ ಸಾಧಕ ಪ್ರಶಸ್ತಿ ಪ್ರಧಾನ ಮಾಡಿದರು.

ಕೀರ್ತಿ ಶೇಷ ಪಾ.ವೆಂ ಆಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಕಿರಣ್ ಮಂಜನ ಬೈಲು, ಸಂಯುಕ್ತ ಕರ್ನಾಟಕ, ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ -2025 ಡಾ. ಮಂದಾರ ರಾಜೇಶ ಭಟ್ , ತುಳುನಾಡು ವಾರ್ತೆ.

ಬನ್ನಂಜೆ ರಾಮಾಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಸಾಂತೂರು ಶ್ರೀನಿವಾಸ ತಂತ್ರಿ ದಾಮೋದರ ಕಕ್ರಣ್ಣಾಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಚಂದ್ರಶೇಖರ ಕುಳಮರ್ವ, ಉಪಯುಕ್ತ ನ್ಯೂಸ್, ಮಾಧವ ಆಚಾರ್ಯ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಆರ್ ಸಿ ಭಟ್, ವಿಜಯ ಕರ್ನಾಟಕ , ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ವೆಂಕಟೇಶ ಪೈ ,ಸಂಜೆ ಪ್ರಭ, ದಾಮೋದರ ಐತಾಳ ಸ್ವರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಶ್ವೇತ ಇಂದಾಜೆ ,ಆಕಾಶವಾಣಿ ಮಂಗಳೂರು, ಕೊಡೆತ್ತೂರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಶಾಮ್ ಹೆಬ್ಬಾರ್, ಬೆಂಗಳೂರು, ಈಶ್ವರಯ್ಯ ಅನಂತಪುರ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿಗೆ ಶ್ರೀಕೃಷ್ಣ ಭಟ್ ಮಾಯ್ಲೆಂಗಿ, ವೈದ್ಯಲೋಕ ಮತ್ತು ಹೆಲ್ತ್ ವಿಷನ್,

ಮಂಜುನಾಥ ಭಟ್ ಸ್ಮರಣಾರ್ಥ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ ಹರೀಶ್ ಕೆ ಆದೂರು , ಹೊಸದಿಗಂತ , ಸ್ವೀಕರಿಸಿದರು.

‘ನಮ್ಮ ಹಿರಿಯರು -ನಮ್ಮ ಹೆಮ್ಮೆ ‘ ವಿಭಾಗದಲ್ಲಿ ನಾಡಿನ ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಲಾಯಿತು, ಎ ಎಸ್ ಎನ್ ಹೆಬ್ಬಾರ್ ಕುಂದಾಪುರ, ವಿಜಯಕುಮಾರ್ ಹೊಳ್ಳ ಕೋಟ ,ಜಿ ಯು ಭಟ್ ಹೊನ್ನಾವರ ,ರಾಮಕೃಷ್ಣ ಮೈರುಗ ಕಾಸರಗೋಡು ,ಗಣೇಶ್ ಪ್ರಸಾದ್ ಪಾಂಡೇಲು, ಜಿಕೆ ಭಟ್ ,ರಾಮಚಂದ್ರ ಆಚಾರ್ಯ , ಲಕ್ಷ್ಮಿ ಮಚ್ಚಿನ,ಪುರುಷೋತ್ತಮ ಭಟ್ ಕಾಸರಗೋಡು ಹಾಗೂ ಸೂರ್ಯನಾರಾಯಣ ಭಟ್ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here