ಶಾಸಕಾಂಗ ಶೃಂಗಸಭೆಯಲ್ಲಿ ಭಾಗವಹಿಸಲು ಆಮೆರಿಕಾ ತೆರಳಿದ ಡಾ.ಮಂಜುನಾಥ ಭಂಡಾರಿ, ಬಲ್ಕೀಶ್ ಬಾನು ಸಹಿತ ಹಲವು ಶಾಸಕರು

0
42

ಶಿವಮೊಗ್ಗ:- ಅಮೆರಿಕಾದ ಬೋಸ್ಟನ್ ನಲ್ಲಿ ನ್ಯಾಷನಲ್ ಕಾನಫೆರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಟರ್ಸ್ ವತಿಯಿಂದ ನಡೆಯಲಿರುವ ಅಂತರರಾಷ್ಟ್ರೀಯ ಶಾಸಕ ಸಮ್ಮೇಳನದಲ್ಲಿ ಭಾಗವಹಿಸಲು ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ್ ಭಂಡಾರಿ ಹಾಗೂ ಬಲ್ಕೀಶ್ ಬಾನು ಸೇರಿದಂತೆ ಕರ್ನಾಟಕದ ಹಲವು ಶಾಸಕರುಗಳು ಭಾಗವಹಿಸಲು ಇಂದು ಅಮೆರಿಕಕ್ಕೆ ತೆರಳಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ರಮೇಶ ಶಂಕರಘಟ್ಟ ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಶೃಂಗಸಭೆಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವಿಕೆ ಶಾಸನ ಸಬೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯಲಿದೆ. ಈ ಸಮಾವೇಶದಲ್ಲಿ ಕರ್ನಾಟಕದ ಎರಡು ಸದನಗಳ ಸಭಾಪತಿಗಳು, ಉಪಸಭಾಪತಿಗಳು, ಸೇರಿದಂತೆ ಸುಮಾರು
20ಕ್ಕೂ ಅಧಿಕ ಶಾಸಕರುಗಳು ಭಾಗವಹಿಸುತ್ತಿದ್ದಾರೆ. ಎಂದು ವರದಿ ನೀಡಿದ್ದಾರೆ.

LEAVE A REPLY

Please enter your comment!
Please enter your name here